ಬೆಳೆಗಳ ಹೆಚ್ಚಿನ ಉತ್ಪಾದನಯಲ್ಲಿ ಕೀಟಗಳು ಮತ್ತು ಪಿಡೆಗಳು ಬಹುಮುಖ್ಯ ಅಡೆತಡೆಗಳಾಗಿವೆ. ಕೃಷಿಯಲ್ಲಿ ಇವುಗಳ ನಿಯಂತ್ರಣಕ್ಕೆ ಹಲವಾರು, ಕೀಟ ಮತ್ತು ರೋಗನಾಶಕಗಳನ್ನು ಬಳಸಲಾಗುತ್ತದೆ. ಕೀಟನಾಶಕಗಳು ಅಂದರೆ ಪೆಸ್ಟಿಸೈಡ್ ಎನ್ನುವ ಪದದಲ್ಲಿರುವ “ಸೈಡ್ ಎಂದರೆ ಸಾವು” ಅಂದರೆ ಕೀಟಗಳನ್ನು ನಾಶ ಪಡಿಸುವುವ ಒಂದು ವಿಷತ್ವವಿರುವ ವಸ್ತು ಬೆಳೆಗಳಲ್ಲಿನ ಕೀಟ ಮತ್ತು ರೋಗ ನಿಯಂತ್ರಣಕ್ಕೆ ಸುಧಾರಿತ ಕೃಷಿ ಪಧ್ದÀತಿಯಲ್ಲಿ ರಾಸಾಯನಿಕ ಮುಲದ ಅನೇಕ ಔಷಧಿಗಳಿವೆ. ಇವುಗಳು ಸಸ್ಯಕೀಟಗಳು ಮತ್ತು ರೋಗಗಳನ್ನು ನಿರ್ವಹಣೆ ಮಾಡುವದಲ್ಲದೆ, ಬೆರೆ ಬೆರೆ ಪ್ರಾಣಿ ಪಕ್ಷಿ, ಮತ್ತು ಮನುಷ್ಯನ ಮೇಲೆ ಕೂಡ ಹನಿಕಾರಕ ದುಷ್ಪರಿಣಮಗಳು ಬೀರುತ್ತಾಯಿವೆ. ಇದರಿಂದ ಬಹಳಷ್ಟು ರೈತರು ಮತ್ತು ಕುಲಿ ಕಾರ್ಮಿಕರು ಸಾವನ್ನಅಪ್ಪಿದಾರೆ.
ಕೀಟನಾಶಕಗಳ ಬಳಕೆಯಿಂದ ಮನುಷ್ಯನ ದೇಹದ ಮೇಲೆ ಉಂಟಾಗುವ ದುಷ್ಪರಿಣಮಗಳನ್ನು ತಡೆಗಟ್ಟಲು ರೈತರ ಕಣ್ಣು ತೆರೆಸಬೇಕಾಗಿದೆ. ರೈತರು ಕೀಟನಾಶಕಗಳನ್ನು ವಿಷವೆಂದು ಅರಿತು ಅದಕ್ಕೆ ತಕ್ಕವಾದ ಸುರಕ್ಷಿತ ಬಳಕೆಯ ಸುತ್ರಗಳÀನ್ನು ಅನುಸರಿಸಲೆಬೇಕು. ಕೀಟನಾಶಕಗಳನ್ನು ಬಳಸುವಾಗ ಮನುಷ್ಯನ ದೇಹದಲ್ಲಿ ಮೂಗು, ಬಾಯಿ, ಕಣ್ಣು, ಚರ್ಮದ ಮತ್ತು ತಲೆಯ ಮುಖಂತರ ನಮ್ಮ ದೇಹದಲ್ಲಿ ಪ್ರವೆಸಿಸುತ್ತವೆÉ, ಅದರಲ್ಲಿ ಬಹು ಮುಖ್ಯವಾಗಿ ಕಿಟನಶಾಕಗಳು ಮೂಗು, ಬಾಯಿ, ಕಣ್ಣು, ಚರ್ಮದಕಿಂತ ತಲೆಯ ಮುಖಂತರ ಮೂರುಪಟ್ಟು ಜಾಸ್ತಿ ನಮ್ಮ ದೇಹದಲ್ಲಿ ಪ್ರವೆಸಿಸುತವೆ. ಅದರಿಂದ ರೈತರು ಕಿಟನಾಶಕಗಳ ಬಳಕೆ ಮಾಡುವ ಮೊದಲು ಯಾವ ಕೀಟಕ್ಕೆ ಯಾವುದು ಸರಿಯಾದುದೆಂದು ಮತ್ತು ಯಾವ ಪ್ರಮಾಣದಲ್ಲಿ ಬಳಸಬೇಕೆಂದು ತಜ್ಞಾರಿಂದ ತಿಳಿದು ಅದೆ ಪ್ರಕಾರ ಬಳಸಬೇಕು. ಕೀಟನಾಶಕಗಳ ಮೇಲೆ ಅಂಟ್ಟಿಸಲಾದ ಚಿಟಿಯಲ್ಲಿ ಇರುವ ವಿವರಗಳನ್ನು, ಅಡ್ಡಪರಿಣಮಗಳನ್ನು ಮತ್ತು ಸೆವನೆಯಿಂದ ತೊಂದರೆ ಯಾದರೆ ತೆಗೆದುಕೊಳಬೆಕಾದ ತುರ್ತು ಮತ್ತು ನಂತರದ ವೈದ್ಯಕಿಯ ವಿಧನಗಳನ್ನು ಅರಿತಿರಬೇಕು. ರೈತರು ಕೀಟನಾಶಕಗಳನ್ನು ಸಿಂಪಡಿಸುವಾಗ ಸೂರಕ್ಷತ ಕವಚಗಳನ್ನು ಅಂದರೆ ನಮ್ಮ ದೇಹಕ್ಕೆ ಪ್ರವೆಸಿಸದಂತೆ ಸೂರಕ್ಷತೆಯ ಉಪಕರಣಗಳಾದ ಕಣ್ಣಿಗೆ ಕನ್ನಡಕ, ತಲೆಗೆ ಟೊಪಿ ಮೂಗು ಮತ್ತು ಬಾಯಿಗೆ ಮುಸುಕುಗಳನ್ನು (ಮಾಸ್ಕ್), ಕೈಗಳಿಗೆ ಹ್ಯಾಂಡ್ ಗ್ಲೋಸ್ ಮತ್ತು ಉದ್ದು ತೊಳಿನ ಉಡುಪುಗಳನ್ನು ದರಸಿ ಕೀಟನಾಶಕಗಳನ್ನು ಸಿಂಪಡಿಸಬೇಕು.
ಸುರಕ್ಷಿತಾ ಕ್ರಮಗಳು
ಹತೋಟಿ ಮಾಡಬೇಕಾಗಿರುವ ಕೀಟದ ಬಗ್ಗೆ, ಹಾನಿ ಮಾಡುವ ರೀತಿ ಮತ್ತು ಬಾಧೆಯ ಪ್ರಮಾಣದ ಬಗ್ಗೆ ತಿಳಿದುಕೊಂಡಿರಬೇಕು. ಶಿಫಾರಸ್ಸು ಮಾಡಲಾದ ಕೀಟನಾಶಕÀಗಳನ್ನು ಮಾತ್ರ ಉಪಯೋಗಿಸಬೇಕು.
ಕೀಟನಾಶಕ ಸಿಂಪರಣೆ ಕಾಲಕ್ಕೆ ಧೂಮಪಾನ ಮಾಡುವದು ತಿನ್ನುವುದು ಅಥವಾ ಕುಡಿಯುವುದನ್ನು ಮಾಡಬಾರದು.
ಮನೆಯಲ್ಲಿ ಸಿಂಪರಣಾ ಮಿಶ್ರಣವನ್ನು ತಯಾರಿಸಬಾರದು. ಬಯಲು ಪ್ರದೇಶದಲ್ಲಿ ತಯಾರಿಸಬೇಕು.
ಸಿಂಪರಣೆ ಮಿಶ್ರಣವನ್ನು ಬರಿ ಕೈಗಳಿಂದ ತಯಾರಿಸಬಾರದು ಉದ್ದವಾದ ಹಿಡಿಕೆಯನ್ನು ಉಪಯೋಗಿಸಬೇಕು.
ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮಾತ್ರ ಕೀಟನಾಶಕವನ್ನು ಉಪಯೋಗಿಸಬೇಕು.
ಮಿಶ್ರಣ ತಯಾರಿಸುವಾಗ ಕೀಟನಾಶವು ಬಟ್ಟೆಯ ಮೇಲಾಗಲಿ ಅಥವಾ ಮೈಮೇಲೆ ಬೀಳದಂÀತೆ ಏಚ್ಚರವಹಿಸಬೇಕು.
ಸಿಂಪರಣೆಯನ್ನು ಗಾಳಿ ಬೀಸುವ ದಿಕ್ಕಿನಿಂದ ಮಾಡಬೇಕು ಗಾಳಿ ಬೀಸುವ ದಿಕ್ಕಿಗೆ ವಿರುದ್ದವಾಗಿ ಸಿಂಪರಣೆ ಮಾಡಬಾರದು.
ಬೆಳೆಗಳು ಹೂ ಬಿಡುತ್ತಿರುವ ಸಮಯದಲ್ಲಿ ಸಾಧ್ಯವಾದಷ್ಷು ಕೀಟನಾಶಕವನ್ನು ಉಪಯೋಗಿಸಬಾರದು.
ಡಾ.ಜಹೀರ್ ಅಹಮದ್ , ಡಾ. ರಾಜು ಜಿ. ತೆಗ್ಗೆಳ್ಳಿ, , ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ