ಶಿವಮೊಗ್ಗ ಜುಲೈ 26:ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿಯನ್ನು ಈ ಕೂಡಲೇ ಮಾಡಿಸಬೇಕು.
ಈಗಾಗಲೇ ಈ ಯೋಜನೆಯಡಿ ರೈತರು ಆರ್ಥಿಕ ಸಹಾಯಧನ ಪಡೆಯುತ್ತಿದ್ದು, ಮುಂದಿನ ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಇ-ಕೆವೈಸಿ ಮಾಡದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತಗೊಳ್ಳಲಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿಯನ್ನು ತಮ್ಮ ತಾಲ್ಲೂಕಿನ ಹತ್ತಿರದ ಸಿಎಸ್‍ಸಿ(ನಾಗರಿಕ ಸೇವಾ ಕೇಂದ್ರ) ಅಥವಾ http://pmkisan.gov.in ಪೋರ್ಟಲ್‍ನ ಫಾರ್ಮರ್ಸ್ ಕಾರ್ನರ್‍ನ ಇ-ಕೆವೈಸಿ ಅವಕಾಶದಡಿ ಮಾಡಿಕೊಳ್ಳಬೇಕು ಎಂದು ಶಿವಮೊಗ್ಗ ಕೃಷಿ ಸಹಾಯಕ ನಿರ್ದೇಶಕ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

error: Content is protected !!