– “ನಾಳೆ ಬೆಳಿಗ್ಗೆ ನಡೆಯಲಿರುವ – ಕರೋನಾ ಎರಡನೆಯ ಅಲೆಯ ಸಂಧರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಆರೋಗ್ಯ ಜಾಗೃತಿ, ಕೋವಿಡ್ ಕೇರ್ ಸೆಂಟರ್ ಗಳ ಕರೋನಾ ರೋಗಿಗಳಿಗೆ ಆರೋಗ್ಯ ಕಿಟ್ ಗಳ ವಿತರಣೆ, ಆಯ್ದ ಸರ್ಕಾರಿ ಆಸ್ಪತ್ರೆಗಳಿಗೆ ಆಕ್ಷಿಜನ್ ಕಾನ್ಸ್ ನ ಟ್ರೆ ಟರ ಗಳ ವಿತರಣೆ, ವಿಕಲ ಚೇತನರಿಗೆ, ಕೋವಿಡ್ ಬಾಧಿತ ಬಡ ಕುಟುಂಬಗಳಿಗೆ, ಗ್ರಾಮೀಣ ಪತ್ರಕರ್ತರಿಗೆ ದಿನಸಿ ಕಿಟ್ ಗಳ ವಿತರಣೆ, ಕೊವಿಡ್ ಹೆಲ್ಪ್ ಡೆಸ್ಕ್ ಮೂಲಕ ಉಚಿತ ಆಪ್ತ ಸಮಾಲೋಚನೆ, ಉಚಿತ ವೈದ್ಯಕೀಯ ಸಮಾಲೋಚನೆ ಮುಂತಾದ ಸೇವೆಗಳನ್ನು ಜಿಲ್ಲೆಯಾದ್ಯಂತ ಒದಗಿಸಿದ “ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್” ತಂಡದ ವತಿಯಿಂದ ಕರೋನಾ ಮೂರನೆಯ ಅಲೆಯನ್ನು ಕಟ್ಟಿಹಾಕುವ ಕುರಿತು ಚರ್ಚಿಸಲು ಜಿಲ್ಲಾ ಮಟ್ಟದ ಸಂಘ ಸಂಸ್ಥೆಗಳ ಪ್ರಮುಖರ ಹಾಗೂ ಸದಸ್ಯರ ಸಮಾಲೋಚನಾ ಸಭೆಯನ್ನು ನಾಳೆ ದಿನಾಂಕ -11-08-2021 ರಂದು ಬುದುವಾರ ಬೆಳಿಗ್ಗೆ 8 ಗಂಟೆಗೆ ಶಿವಮೊಗ್ಗದ ರಾಜೇಂದ್ರ ನಗರ ಬಡಾವಣೆಯ ರೋಟರಿ ಶಾಲಾ ಆವರಣದಲ್ಲಿ ಕರೆಯಲಾಗಿದೆ, ಶಿವಮೊಗ್ಗ ನಗರ ಹಾಗೂ ಶಿವಮೊಗ್ಗ ಜಿಲ್ಲೆ ಯಾದ್ಯಂತ ಕರೋನಾ ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ಹಾಗೂ ಸರ್ಕಾರದ ಜತೆ ಹೇಗೆ ಕೈಜೋಡಿಸಿ ಕೆಲಸ ಮಾಡಬಹುದು ಎಂಬ ಬಗ್ಗೆ ಸಮಾಲೋಚನೆ ನಡೆಸಲು ಈ ಸಭೆ ಕರೆಯಲಾಗಿದ್ದು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳ ಕ್ಷೇಮಾಭಿವೃದ್ಧಿ ಗಾಗಿ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ತಪ್ಪದೇ ಈ ಸಭೆಗೆ ಆಗಮಿಸಿ ನಿಮ್ಮ ಸಲಹೆ ಸಹಕಾರ ನೀಡಬೇಕೆಂದು ಶಿವಮೊಗ್ಗ ಹೆಲ್ಪಿಂಗ್ ಹ್ಯಾಂಡ್ಸ್ ಸಂಯೋಜಕರಾದ ಶ್ರೀ ಕೆ.ಸಿ.ಬಸವರಾಜ್ ರವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9483003823 ನಂಬರ್ ಗೆ ಸಂಪರ್ಕಿಸಬಹುದು