ಸಹಾಯಕ ಕೃಷಿ ನಿದೇಶಕರ ಕಚೇರಿ ಸಾಗರದಲ್ಲಿ ಸಾವಯವ ಸಿರಿ ಯೋಜನೆಯಡಿ ತರಬೇತಿಯನ್ನು ಏರ್ಪಡಿಸಲಾಗಿತ್ತು.ಉಪ ಕೃಷಿ ನಿದೇರ್ಶಕರಾದ ಡಾ. ಡಿ.ಎಂ. ಬಸವರಾಜ್ ಕಾರ್ಯಕ್ರಮವನ್ನು ಉದ್ಗಾಟಿಸಿದರು.
ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಉಪ ಕೃಷಿ ನಿದೇರ್ಶಕರಾದ ಡಾ. ಡಿ.ಎಂ. ಬಸವರಾಜ್ ಸಾವಯವ ಕೃಷಿ ಅಗತ್ಯತೆ ಹಂತ ಹಂತವಾಗಿ ಸಾವಯವ ಕೃಷಿಗೆ ಮಾರ್ಪಾಡುಹೊಂದಲು ತಿಳಿಸಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಪ್ರೋತ್ಸಾಹಿಸಲು ಕೆಂದ್ರಸರ್ಕಾರ ಜಾರಿಗೆ ತಂದಿರುವ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಜ್ಯೋತಿ ಎಂ ರಾಥೋಡ್ ಮಾತನಾಡಿ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಗೆ ಆಯ್ಕೆಯಾಗಿರುವ ಅನಾನಸ್ ಮತ್ತು ಮಲೆನಾಡಿನಲ್ಲಿ ಬೆಳೆಯುವ ಹಲಸು ಮಾವಿನ ಮಿಡಿ ಕೆಂಪಕ್ಕಿ ಬಾಳೆ ಕಾಳು ಮೆಣಸು ಇತ್ಯಾದಿ ಬೆಳೆಗಳಿಂದ ಅತೀ ಉತ್ಕøಷ್ಟ ಪದಾರ್ಥಗಳನ್ನು ತಯಾರಿಸಲು ಅವಕಾಶವಿದೆ. ಈ ಬಗ್ಗೆ ನಮ್ಮ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುವ ಮಾಹಿತಿ ಕಾರ್ಯಗಾರಗಳಲ್ಲಿ ಭಾಗವಹಿಸಿ ತರಬೇತಿಯನ್ನು ಪಡೆದುಕೊಳ್ಳತಕ್ಕದ್ದು ಎಂದು ತಿಳಿಸಿದರು.
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ದತ್ತಾತ್ರೇಯ ಹೆಗಡೆ ರಾಮಚಂದ್ರಾಪುರ ಮಠದ ವತಿಯಿಂದ ಗ್ರಾಮರಾಜ್ಯ ಮಳಿಗೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದು ಸಾವಯವ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಸಂಪರ್ಕಿಸಲು ಕೋರಿದರುಸ್ಥಳೀಯವಾಗಿ ತಾವು ಸಂಸ್ಕರಿಸಿದ ಪದಾರ್ಥಗಳನ್ನು ಬೃಹತ್ ಮಹಾನಗರಗಳ ಮಾರುಕಟ್ಟೆಗೆ ತಲುಪಿಸಲು ಸಾಕಷ್ಟು ತರಬೇತಿ ಕ್ಷೇತ್ರ ಅಧ್ಯಯನ ಮಾಡಿ ಉತ್ತಮ ಅವಕಾಶಗಳನ್ನು ಸೃಷ್ಟಿಸಿÀಕೊಳ್ಳಬಹುದು ಎಂದು ತಿಳಿಸಿದರು.
ಶ್ರೀ ಸೀತಾರಾಮ್ ಸಂಯೋಜಕರು ಧರ್ಮಟ್ರಸ್ಟ್ ಬೆಂಗಳೂರು ರವರು ಮಾತನಾಡಿ ಮೌಲ್ಯವರ್ಧಿ ಸಾವಯವ ಉತ್ಪನ್ನಗಳ ಗ್ರೇಡಿಂಗ್, ಕ್ಲೀನಿಂಗ್,ಪ್ಯಾಕಿಂಗ್ ದಾಸ್ತಾನು ಮತ್ತು ಸಾಗಾಣಿಕೆ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕರಾದ ಕಾಶೀನಾಥ್ ಒಂಟೇಕರ್ ರವರು ಸಾವಯವ ಭಾಗ್ಯ, ಸವಯವ ಗ್ರಾಮ, ಸಾವಯವ ಮಿಷನ್ ಅಡಿ ಸಾಕಷ್ಟು ಪ್ರೋತ್ಸಾಹವನ್ನು ಇಲಾಖೆಯಲ್ಲಿ ನೀಡಲಾಗುತ್ತಿದೆ ರೈತರು ಈ ಯೋಜನೆಗಳ ಲಾಬ ಪಡೆಯಲು ಕರೆ ನೀಡಿದರು.
ಬಿ.ಆರ್.ವಿನಾಯಕರಾವ್ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಆತ್ಮಯೋಜನೆ ಸಾಗರ, ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು.

error: Content is protected !!