ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ ಶಿವಮೊಗ್ಗ ಹಾಗೂ ಜನ ಶಿಕ್ಷಣ ಸಂಸ್ಥೆ ಶಿವಮೊಗ್ಗ ಇವರ ಸಹಯೋಗದೊಂದಿಗೆ “ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಸಾವiಥ್ರ್ಯ ಅಭಿವೃದ್ದಿ ತರಬೇತಿ ಕಾರ್ಯಕ್ರಮ” ವನ್ನು ತಮ್ಮಡಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಡಾ. ಬಿ.ಸಿ. ಹನುಮಂತಸ್ವಾಮಿ, ಸಹ ವಿಸ್ತರಣಾ ನಿರ್ದೇಶಕರು, ಕೆ.ಶಿ.ನಾ.ಕೃ.ತೋವಿ.ವಿ ಇರುವಕ್ಕಿ, ಶಿವಮೊಗ್ಗ ರವರು ಉದ್ಘಾಟನೆಯನ್ನು ನೆರವೇರಿಸಿ ಉದ್ಘಾಟನಾ ಭಾಷಣದಲ್ಲಿ ಮಾತನಾಡಿ ಹಲಸಿನ ಹಣ್ಣು ಋತುಕಾಲದಲ್ಲಿ ಎಲ್ಲಾ ವರ್ಗದ ಜನರಿಗೆ ಕಡಿಮೆ ಬೆಲೆಗೆ ಹೇರಳವಾಗಿ ದೊರೆಯುವ ಹಣ್ಣಾಗಿದೆ. ಈ ಹಣ್ಣಿನಲ್ಲಿರುವ ತೊಳೆ, ಬೀಜ ಮತ್ತು ಸಿಪ್ಪೆಯನ್ನು ಸಂಸ್ಕರಿಸಿ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಅಧಿಕ ಲಾಭ ಪಡೆಯಬಹುದಾಗಿದೆ ಎಂದು ಹೇಳಿದರು.
ಕೆ.ವಿ.ಕೆ ಶಿವಮೊಗ್ಗದ ಗೃಹ ವಿಜ್ಞಾನಿಯಾದ ಡಾ.ಜ್ಯೋತಿ ಎಂ ರಾಠೋಡ್ ರವರು ಮಾತನಾಡಿ ಹಲಸಿನ ಹಣ್ಣು ಸುವಾಸನೆ ಹಾಗೂ ರುಚಿ ಎರಡನ್ನೂ ಹೊಂದಿದೆ. ಈ ಹಣ್ಣನ್ನು ಬಳಸಿಕೊಂಡು ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಹಲಸಿನ ಹಣ್ಣಿನಲ್ಲಿ ವಿಟಾಮಿನ್, ಖನಿಜಾಂಶ, ಕಾರ್ಬೋಹೈಡ್ರೇಟ್, ಎಲೆಕ್ಟ್ರೋಲೈಟ್‍ಗಳು, ಪೊಟ್ಯಾಷಿಯಂ ಹಾಗೂ ನಾರಿನಾಂಶಗಳು ಯೆಥೇಚ್ಚವಾಗಿ ಸಿಗುವುದರಿಂದ ಇದೊಂದು ಆರೋಗ್ಯಕಾರಿ ಹಣ್ಣು. ಹಲಸಿನ ಹಣ್ಣಿನ ಮೌಲ್ಯವರ್ಧನೆ ಮಹತ್ವ ಹಾಗೂ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳಾದ ಹಲಸಿನ ಜಾಮ್, ಜ್ಯೂಸ್, ಹಲ್ವಾ ಮತ್ತು ಚಿಪ್ಸ್ ತಯಾರಿಕೆಯ ವಿಧಾನವನ್ನು ಪ್ರಾಯೋಗಿಕವಾಗಿ ಹೇಳಿಕೊಟ್ಟರು.
ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರತಿಭಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ತಮ್ಮಡಿಹಳ್ಳಿ ರವರು ಅಧ್ಯಕ್ಷತೆಯನ್ನು ವಹಿಸಿದ್ದರು, ಶ್ರೀ ನಾಗರಜ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ತಮ್ಮಡಿಹಳ್ಳಿ, ಶ್ರೀಮತಿ ಶೋಭಾ(ಎಪಿಒ) ಜನ ಶಕ್ಷಣ ಸಂಸ್ಥೆ ಶಿವಮೊಗ್ಗ ಹಾಗೂ ಶಿಕ್ಷಕಿ ಅಶ್ವಿನಿ ರವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸದರಿ ಕಾರ್ಯಕ್ರಮದಲ್ಲಿ ತಮ್ಮಡಿಹಳ್ಳಿ ಗ್ರಾಮದ ಒಟ್ಟು 56 ಜನ ಸ್ವ ಸಹಾಯ ಸಂಘದ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು

error: Content is protected !!