ನಗರದ ಕೆಎಸ್ಆರ್ ಟಿಸಿ ಬಡಾವಣೆಯ ಮೂಲಭೂತ ಸೌಕರ್ಯ ಒದಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಭರವಸೆ ನೀಡಿದರು..
ಕೆಎಸ್ಆರ್ ಟಿಸಿ ಬಡಾವಣೆಯ ನಿವಾಸಿಗಳ ಕುಂದು ಕೊರತೆ ಆಲಿಸಿ, ಮನವಿ ಪತ್ರ ಸ್ವೀಕರಿಸಿದ ಅವರು, ಈ ಭಾಗದ ಅಭಿವೃದ್ದಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಗೊಳ್ಳಲಾಗುವುದು ಎಂದರು.
ಈ ಸಂದಭ೯ದಲ್ಲಿ ಶಾಸಕ ಎಸ್. ಎನ್. ಚನ್ನಬಸಪ್ಪರವರನ್ನು ಬಡಾವಣೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾಯ೯ಕ್ರಮದಲ್ಲಿ ಬಡಾವಣೆ ಅಧ್ಯಕ್ಷರಾದ ಕೆ ವಿ ಅಶೋಕ್ ಕುಮಾರ್ ಗೌರವಾಧ್ಯಕ್ಷರಾದ ಮೋಹನ್ ಉಪಾಧ್ಯಕ್ಷರಾದ ಈಶ್ವರಪ್ಪ ಸಿ , ಕಾರ್ಯದರ್ಶಿ ವಾಸುದೇವ್ ಕೆ ಸಹ ಕಾರ್ಯದರ್ಶಿ ವಿಶ್ವೇಶ್ವರಯ್ಯ ಖಜಾಂಚಿ ಕೇಶವ್ ಸಿ ಶೇಟ್. ಡಾಕ್ಟರ್ ನಾಗರಾಜ್ ಅಂಗಡಿ. ಶ್ರೀಧರ್ ಲೋಕೇಶ್ ಸುರೇಶ್ ಪಟೇಲ್. ನಾಗಭೂಷಣ್ ಗಣೇಶ್ ಉಡುಪ. ಇಂದಿರಾ ಹಾಗೂ ಪದಾಧಿಕಾರಿಗಳು, ನಿರ್ದೇಶಕರು ನಿವಾಸಿಗಳು, ಹಿತೈಷಿಗಳು ಹಾಜರಿದ್ದರು.