
ಶಿವಮೊಗ್ಗ, ಜ.೦೧ : ಶಿವಮೊಗ್ಗ ಹೊರವಲಯದ ಅನುಪಿನ ಕಟ್ಟೆಯಲ್ಲಿರುವ ಶ್ರೀರಾಮಕೃಷ್ಣ ಆಂಗ್ಲ ಮಾದ್ಯಮ ಗುರುಕುಲ ವಸತಿ ವಿದ್ಯಾಲಯ ದಲ್ಲಿ ಇಂದು ಹಬ್ಬದ ಸಢಗರ. ೭೫೦ ಮಕ್ಕಳು ತಮ್ಮ ತಂದೆ ತಾಯಿಯರ ಪಾದಪೂಜೆ ನಡೆಸುವ ಸಢಗರ, ಶಿವಮೊಗ್ಗ ಜಿಲ್ಲೆ ಸೇರಿ ದಂತೆ ರಾಜ್ಯದ ಬಹುತೇಕ ಮಕ್ಕಳು ಹಾಗೂ ಪೋಷಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ರಂಗು ಮೂಡಿಸಿದರು.
ಬೆಳಗ್ಗೆ ೮ ಗಂಟೆಯಿಂದ ಶ್ರೀ ಸತ್ಯನಾರಾ ಯಣ ಸ್ವಾಮಿ ಪೂಜೆಯೊಂದಿಗೆ ಆರಂಭ ಗೊಂಡ ಕಾರ್ಯಕ್ರಮದ ಮುಖ್ಯ ಘಟವಾದ ಜನ್ಮದಾತರ ಪಾದಪೂಜೆ ಸಮಾರಂಭ ಅತ್ಯಂತ ವ್ಯವಸ್ಥಿತವಾಗಿ ನಡೆಯಲು ಶಾಲೆಯ ಆಡಳಿತ ಮಂಡಳಿ ಕ್ರಮಕೈಗೊಂಡಿತ್ತು. ಮಕ್ಕಳು ಜನ್ಮದಾತರಿಗೆ ವಿಶೇಷವಾಗಿ ಶ್ರದ್ಧಾ ಭಕ್ತಿ ಯಿಂದ ಮಂತ್ರಾಕ್ಷತೆಯೊಂದಿಗೆ ಪಾದಪೂಜೆ ಮಾಡಿ ನಮಸ್ಕರಿಸುತ್ತಿದ್ದ ಸನ್ನಿವೇಶ ಇಡೀ ರಾಜ್ಯದಲ್ಲಿ ಮಾದರಿಯಾದ ಕಾರ್ಯಕ್ರಮ ವಾಗಿದೆ.
ಜಡೆ ಸಂಸ್ಥಾನ ಮಠದ ಡಾ.ಮಹಾಂತ ಮಹಾಸ್ವಾಮಿಗಳು ಸಾನಿಧ್ಯವಹಿಸಿದ ಸಮಾ ರಂಭದಲ್ಲಿ ಸಾಗರದ ಶ್ರೀರಾಮಕೃಷ್ಣ ವಿವೇಕಾ ನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜ್ಞಾನನಂದಜೀ ಮಹಾರಾಜ್ ಅವರು ಉಪಸ್ಥಿತರಿದ್ದರು. ಪಾದಪೂಜೆ ಜೊತೆಗೆ ಮೆರಿಟ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾ ಸಾಧಕ ಮಕ್ಕಳಿಗೆ ಸನ್ಮಾನ ಕಾರ್ಯ ಕ್ರಮದ ವಿಶೇಷವಾಗಿದ್ದವು.
ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ನ ಸದಸ್ಯ ಡಿ.ಎಂ.ದೇವ ರಾಜ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಿರಂತರವಾಗಿ ನಡೆಯುತ್ತಾ ಬಂದಿರುವ ಜನ್ಮದಾತರ ಪಾದಪೂಜೆ ಇಡೀ ರಾಜ್ಯದಲ್ಲಿ ಮಾದರಿ ಹಾಗೂ ವಿಶೇಷವೆಂದರು.
ಶಾಲೆಯ ಹಳೆಯ ವಿದ್ಯಾರ್ಥಿ ಡಾ.ವಿನಯ್ ಕೆ.ಅಲಗುಂಡಿಗೆ, ವ್ಯವಸ್ಥಾಪಕ ಟ್ರಸ್ಟಿ ಶೋಭಾ ವೆಂಕಟರಮಣ, ಅರುಣ್, ತೀರ್ಥೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನನ್ನ ತಂದೆಯವರ ಬಹುದೊಡ್ಡ ಆಸೆಯಾಗಿದ್ದ ಶ್ರೀ ರಾಮಕೃಷ್ಣ ಆಶ್ರಮದ ಕಲಿಕೆ ಶಿವಮೊಗ್ಗದ ರಾಮಕೃಷ್ಣ ಶಾಲೆ ನನ್ನ ಪಾಲಿಗೆ ವರದಾನವಾಯಿತು. ಮೈಸೂರು ಸೇರಿದಂತೆ ಹಲವೆಡೆ ರಾಮಕೃಷ್ಣ ಆಶ್ರಮದ ಶಾಲೆಗೆ ಸೇರಲು ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿನ ಆರಂಭಿಕ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದೆ. ಇಲ್ಲಿಗೆ ಹೋಗಲು ತಿಳಿಸಿದ್ದರು. ಇಲ್ಲಿಯೂ ಅನುತ್ತೀರ್ಣನಾಗಿದ್ದೆ. ಈ ಸಂಸ್ಥೆಯ ಸಂಸ್ಥಾಪಕರಾದ ಡಿ.ಎಂ.ವೆಂಕಟರಮಣ ಅವರನ್ನು ವಿನಂತಿಸಿದರ ಮೇರೆಗೆ ನನಗೆ ಪ್ರವೇಶ ದೊರೆಯಿತು. ಅದು ನನ್ನ ಪಾಲಿಗೆ ಅದೃಷ್ಠವೇ ಹೌದು. ಬಿಜಾಪುರ ಮೂಲದಿಂದ ಬಂದ ನಾನು ಎಲ್ಲೆಡೆ ಸೋತು ಇಲ್ಲಿ ಗೆದ್ದು ಹೋಗಿದ್ದೇನೆ. ವೈದ್ಯಕೀಯ ಪದವಿ ಪಡೆಯಲು ಈ ಶಾಲೆ ನೀಡಿದ ಆರಂಭಿಕ ಅಡಿಪಾಯವೇ ಕಾರಣ.
-ಡಾ.ವಿನಯ್ ಕೆ ಅಲಗುಂಡಿಗೆ