ಹಿಂಗಾರು ಹಂತದಲ್ಲಿ ಚಳಿ ಏರುಪೇರಾಗುತ್ತಿದ್ದು ಬಂಗಾಳ ಕೊಲ್ಲಿಯ ವಾಯುಭಾರ ಕುಸಿತ ಪರಿಣಾಮದಿಂದ ಕೆಲವೆಡೆ ತುಂತುರು ಮಳೆಯಾಗುತ್ತಿದ್ದು, ಎಲೆ ಮತ್ತು ಹೂ ಕೋಸು ಬೆಳೆಗಳಲ್ಲಿ ಬ್ಯಾಕ್ಟಿರೀಯಾ ದುಂಡಾಣು ಎಲೆ ಮಚ್ಚೆರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಎಲೆಗಳಲ್ಲಿ ಎಣ್ಣೆ ಕಂದುಬಣ್ಣದ ಚುಕ್ಕಿಗಳು ಒಂದಕ್ಕೊಂದು ಕೂಡಿಕೊಂಡು ಎಲೆ ಮಧ್ಯ ಹಾಗೂ ಅಂಚಿನ ಭಾಗದಲ್ಲಿ ಸಂತಾನ ಅಭಿವೃದ್ಧಿಯಾಗುವುದರಿಂದ ರೋಗವು ಮೋಡಕವಿದ ವಾತಾವರಣದಲ್ಲಿ ಹೆಚ್ಚು ಪ್ರಸಾರವಾಗುವ ಸಾಧ್ಯತೆ ಇದೆ.
ರಾತ್ರಿ ವೇಳೆ ಚಳಿಯ ವಾತಾವರಣವು ಕೋಸು ಜಾತಿಯ ಬೆಳೆಗೆ ಸೂಕ್ತವಾಗಿದ್ದು ಉತ್ತಮ ಇಳುವರಿ ಪಡೆಯಲು ಆಗಾಗ್ಗೆ ಕಾಣಿಸಿಕೊಳ್ಳುವ ಕೀಟರೋಗಗಳನ್ನು ಗುರುತಿಸಿ ಹತೋಟಿಯಲ್ಲಿಡಬೇಕು. ದುಂಡಾಣು ಹತೋಟಿಗಾಗಿ ಸುಡೋಮೊನಾಸ್ ಜೈವಿಕ ರೋಗನಾಶಕವನ್ನು 5ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ:ಜಹೀರ್ ಅಹಮ್ಮದ, ಐಸಿಎಆರ್-ಕೆವಿಕೆ ಕಲಬುರಗಿ 9845300326