ಶಿವಮೊಗ್ಗ, ಜೂನ್ 12
ಕರ್ನಾಟಕ ಕೌಶಲ್ಯಾಭಿವದ್ದಿ ನಿಗಮ ಹಾಗೂ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಜೂನ್ 15 ರಂದು ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮ, ಕೌಶಲ್ಯ ಮಿಷನ್, ಕೌಶಲ್ಯ ಭವನ, ಬನ್ನೇರುಘಟ್ಟ ರಸ್ತೆ, ಡೈರಿ ವೃತ್ತ ಬೆಂಗಳೂರು-29 ಇಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್‍ಗಳಲ್ಲಿ ಸ್ವೀವರ್ಡ್, ಕ್ಯಾಪ್ಟನ್, ಅಡುಗೆ ಸಹಾಯಕ, ಮಾಣಿ, ಮೇಲ್ವಿಚಾರಕ, ಬಾಣಸಿಗ ಹಾಗೂ ಇತರೆ ಕೆಲಸಗಾರರ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲು ಉದ್ಯೋಗಾವಕಾಶವಿದೆ.
ಆಸಕ್ತ ಅಭ್ಯರ್ಥಿಗಳು ಜಾಲತಾಣ https://tinyurl.com/ksdcjobdriveಇಲ್ಲಿ ನೊಂದಾಯಿಸಿಕೊಂಡು ಅಥವಾ ಜೂನ್ 15 ರಂದು ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಮೇಳದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08182-255294/9019485688 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಹೆಚ್.ಎಂ.ಸುರೇಶ್ ತಿಳಿಸಿದ್ದಾರೆ.

error: Content is protected !!