ಶಿವಮೊಗ್ಗ, ಮಾರ್ಚ್ 10 : ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ (ಬೆಂಗಳೂರು), ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್)ಧಾರವಾಡ ಹಾಗೂ ಗ್ರಾಮೀಣ ಕೈಗಾರಿಕೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯತಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನವುಲೆ ಕೃಷಿ ವಿಜಾÐನ ಕೇಂದ್ರ, ಕೃಷಿ ಕಾಲೇಜ್ನಲ್ಲಿ ಆಯೋಜಿಸಲಾಗಿದ್ದ 6 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಶಿಬಿರದ ಸಮರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದ ಅದ್ಯಕ್ಷತೆಯನ್ನು ಶ್ರೀನಿವಾಸ್ ಕಾಸರವಳ್ಳಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅದ್ಯಕ್ಷರು ಜಿಲ್ಲಾ ಪಂಚಾಯಿತಿ ಶಿವಮೊಗ್ಗ ವಹಿಸಿದ್ದು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನ ವಿತರಿಸಿ ತರಬೇತಿ ಪಡೆದಂತಹ ಎಲ್ಲಾ ಶಿಭಿರಾರ್ಥಿಗಳಿಗೆ ಶುಭ ಹಾರೈಸಿದರು, ಈ ಕಾರ್ಯಕ್ರಮದಲ್ಲಿ ಅತಿಥಿಗಳಾದ ಶಿವಮೊಗ್ಗದ ಹಿರಿಯ ವಿಜಾÐನಿ ಮತ್ತು ಕೃಷಿ ವಿಜಾÐನ ಕೇಂದ್ರದ ಮುಖ್ಯಸ್ಥ ಡಾ. ಹನುಮಂತಸ್ವಾಮಿ ಬಿ ಸಿ ಇವರು ಶಿಬಿರಾರ್ಥಿಗಳಿಗೆ ಕೇವಲ ತರಬೇತಿ ಪಡೆದು ಸುಮ್ಮನಿರದೆ ಆ ವಿಷಯ ಜಾÐನವನ್ನು ನಿಮ್ಮ ಜೀವನ ಅಥವಾ ಉದ್ಯಮದಲ್ಲಿ ಬಳಸಿಕೊಂಡು ಯಶಸ್ವಿ ಉದ್ಯಮಿಗಳಾಗಿ ಎಂದು ಹಾರೈಸಿದರು. ರವೀಂದ್ರನಾಥ್ ಎಸ್.ಪಿ. ಉಪನಿರ್ದೇಶಕರು ಗ್ರಾಮೀಣ ಕೈಗಾರಿಕೆ ವಿಭಾಗ ಜಿಲ್ಲಾಪಂಚಾಯತ್ ಶಿವಮೊಗ್ಗ, ಪ್ರಸನ್ನ ಕುಮಾರ್ ಪ್ರಥಮ ದರ್ಜೆಯ ಸಹಾಯಕರು ಗ್ರಾಮೀಣ ಕೈಗಾರಿಕೆ ವಿಭಾಗ ಜಿಲ್ಲಾಪಂಚಾಯತ್ ಶಿವಮೊಗ್ಗ ಸಿಡಾಕ್-ದಿಶಾ ಸಿಬ್ಬಂದಿ ವರ್ಗದರು ಮತ್ತು ಶಿಭಿರಾರ್ಥಿಗಳು ಉಪಸ್ಥಿತರಿದ್ದರು
ಕಾರ್ಯಕ್ರಮದ ನಿರೊಪಣೆಯನ್ನು ವಿನಯ ಜಿ ಕೆ ಸಿಡಾಕ್ ದಿಶಾ ಕೇಂದ್ರ ವ್ಯವಸ್ಥಾಪಕರು ಶಿವಮೊಗ್ಗ ರೇವತಿ ಶಿಭಿರಾರ್ಥಿ ಸ್ವಾಗತಿಸಿದರು ಅವಿನಾಶ ಎ ವಂದಿಸಿದರು. ಕಾರ್ಯಕ್ರಮದಲ್ಲಿ ಸಿಡಾಕ್ ಔಟ್ರೀಚ್ ತರಬೇತಿದಾರರು ಮತ್ತು 64 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.