ಇಂದು ಶಿವಮೊಗ್ಗ ತಾಲ್ಲೂಕು ಪಂಚಾಯಿತಿಯಲ್ಲಿ ಕೆಡಿಪಿ ಸಭೆಯು ಶಿವಮೊಗ್ಗ ವಿಧಾನ ಸಭಾ ಸದಸ್ಯರಾದ ಕೆ.ಬಿ .ಅಶೋಕ ನಾಯ್ಕ ಇವರ ಅದ್ಯಕ್ಷತೆಯಲ್ಲಿ ನಡೆಯಿತು .
ತಾಲ್ಲೂಕು ಅಧಿಕಾರಿಗಳ ಜೊತೆ ನಡೆಸಿದ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ವಿಧಾನ ಸಭಾ ಸದಸ್ಯ ಕೆ.ಬಿ. ಅಶೋಕ ನಾಯ್ಕ ಮಾತನಾಡಿ ಸಕಾ೯ರಿ ಶಾಲೆಗಳಲ್ಲಿ ಇರುವಂತಹ ಶೌಚಾಲಯಗಳಲ್ಲಿ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಸಿಬ್ಬಂದಿಗಳ ಅವಶ್ಯಕತೆ ಇರುವುದರಿಂದ, ಇಂದೇ ತಕ್ಷಣ ಸಕಾ೯ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದಭ೯ದಲ್ಲಿ ಈ ಬಾರಿಯ ಎಸ್. ಎಸ್. ಎಲ್ . ಸಿ ಫಲಿತಾಂಶ ಸುಧಾರಣೆಗೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶಾಸಕರಾದ ಅಶೋಕ ನಾಯ್ಕ ಸೂಚಿಸಿದರು.. ಈ ಸಂಭಂಧ ಉತ್ತರ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಈ ಬಾರಿ ಉತ್ತಮ ಫಲಿತಾಂಶದ ನೀರಿಕ್ಷೆಯನ್ನು ಮಾಡಲಾಗುತ್ತಿದೆ. ಎಲ್ಲಾ ಶಾಲೆಗಳಿಗೆ ವಿಶೇಷ ಅದ್ಯಯನ ತರಗತಿಗಳನ್ನು ನಡೆಸಲು ಆಯಾ ಶಾಲೆಯ ಮುಖ್ಯ ಶಿಕ್ಷಕರುಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ, ಎಂದು ತಿಳಿಸಿದರು.