ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶದ ಬಲಿಷ್ಠ ಸೈನ್ಯ ಪಡೆ ಇದ್ದಂತೆ ಇಂತಹ ಮೌಲ್ಯಾಧಾರಿತ ಸಂಘದ ಸಮವಸ್ತ್ರವನ್ನು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ NSUI ಪ್ರತಿಭಟನೆಯ ಹೆಸರಿನಲ್ಲಿ ಸಂಘದ ಸಮವಸ್ತ್ರ ಸಾರ್ವಜನಿಕವಾಗಿ ಸುಟ್ಟು ಹಾಕಿರುವುದು ತೀವ್ರ ಖಂಡನೀಯ ಎಂದು ಮಾಜಿ ಎ.ಪಿ.ಎಂ.ಸಿ ಹಾಗೂ ಸೂಡಾ ಅಧ್ಯಕ್ಷರಾದ ಎಸ್. ಎಸ್. ಜ್ಯೋತಿಪ್ರಕಾಶ್ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಆರ್.ಎಸ್.ಎಸ್ ಸಂಸ್ಥೆಯನ್ನು ಶ್ರೀ ಕೇಶವ ಬಲಿರಾಂ ಹೆಡಗೆವಾರ್ ಅವರು ಯಾವುದೇ ಸ್ವಾರ್ಥಕ್ಕಾಗಿ ಹುಟ್ಟು ಹಾಕದೇ ದೇಶದ ಸಾರ್ವಭೌಮತ್ವವನ್ನು, ಅಖಂಡತೆಯನ್ನು ಹಾಗೂ ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುವ ಮೂಲ ಆಶಯದಿಂದ ಕಟ್ಟಿದ ಸ್ವಾತ್ರಂತ್ರ್ಯ ಭಾರತದ ಮೊಟ್ಟ ಮೊದಲ ಸಂಸ್ಥೆಯಾಗಿದ್ದು, ಇದರ ಪೂರ್ಣ ಇತಿಹಾಸ ತಿಳಿಯದೇ ತಮ್ಮ ರಾಜಕೀಯ ದುರುದ್ದೇಶದಿಂದ ಪದೇ ಪದೇ ಸಂಘದ ವಿರುದ್ಧ ಹೇಳಿಕೆ ನೀಡುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಬೆಳದ ಪ್ರತಿಯೊಬ್ಬ ಕಾರ್ಯಕರ್ತನು ದೇಶಕ್ಕಾಗಿ ತನ್ನ ಉಸಿರನ್ನು ನೀಡುವ ಭಾರತ ಮಾತೆಯ ಮಗನಾಗಿ ರೂಪಿತನಾಗುತ್ತಾನೇ ವಿನಹ ಸಮಾಜಗಾತುಕ ಶಕ್ತಿಯಾಗಿ ಎಂದಿಗೂ ಗುರುತಿಸಿ ಕೊಳ್ಳುವುದಿಲ್ಲ ಎಂಬುದನ್ನು ಆರೋಪ ಮಾಡುವ ಮೊದಲು ವಿರೋಧ ಪಕ್ಷದವರು ಅರಿಯಬೇಕು, ಒಂದು ವೇಳೆ NSUI ಅಥವಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೇವಲ ಒಂದೇ ಒಂದು ದಿನ ಸಂಘವು ನೀಡುವ ಮೂಲ ತರಬೇತಿಗಾಗಿ ಶಾಖೆಗೆ ಬಂದರೆ ನಿಮ್ಮ ಕೆಟ್ಟ ರಾಜಕೀಯ ಮನಸ್ಥಿತಿಗೆ ಸೂಕ್ತ ಮುಲಾಮು ದೊರೆಯುತ್ತದೆ ಎಂದು ಹೇಳುವ ಮೂಲಕ ಆಹ್ವಾನ ನೀಡಿದರು.
ಸಂಘದಲ್ಲಿ ಯಾವುದೇ ಜಾತಿ ಸಂಘರ್ಷಕ್ಕೆ ಅವಕಾಶವಿಲ್ಲ, ಸಂಘಕ್ಕೆ ಬರುವ ಪ್ರತಿಯೊಬ್ಬ ಸ್ವಯಂ ಸೇವಕನನ್ನು “ಸೇವೆ ಎಂಬ ಯಜ್ಞದಲ್ಲಿ ಸವುದೇಯಂತೆ ಹುರಿಯುವ” ಹಾಗೇ ರಾಷ್ಟ್ರೀಯತೆಯನ್ನು ಶಿಖರದೇತ್ತರಕ್ಕೆ ಕೊಂಡೊಯ್ಯುವ ರೀತಿಯಲ್ಲಿ ತಯಾರು ಮಾಡುತ್ತಾರೆ, ಇಲ್ಲಿ ಜಾತಿ ಹಾಗೂ ರಾಜಕಿಯಕ್ಕೆ ಯಾವುದೇ ಅವಕಾಶವಿಲ್ಲ ಇಂತಹ ದೇಶ ಭಕ್ತ ಸಂಘಟನೆಯ ವಿರುದ್ಧ ಪದೇ ಪದೇ ಪಿತೂರಿ ಮಾಡುವುದರಿಂದ ನಿಮ್ಮ ರಾಜಕೀಯ ಅಂತ್ಯಕ್ಕೆ ನಾಂದಿ ಹಾಡಿದಂತೆ ಎಂದು ಭವಿಷ್ಯ ನುಡಿದಿದ್ದಾರೆ.
ಸಂಘದ ಸಮವಸ್ತ್ರಕ್ಕೆ ಬೆಂಕಿ ಇಡುವುದು ಒಂದೇ ದೇಶದ ಸೈನಿಕರ ಸಮವಸ್ತ್ರಕ್ಕೆ ಬೆಂಕಿ ಇಡುವುದು ಒಂದೇ, ದೇಶದ ಗಡಿ ಭಾಗದಲ್ಲಿ ಶತ್ರುಗಳ ವಿರುದ್ಧ ಹಗಲು ರಾತ್ರಿ ಎನ್ನದೇ ದಿಟ್ಟತನದಿಂದ ಹೋರಾಡುವ ಸೈನಿಕರು ಒಂದೆಡೆಯಾದರೆ, ದೇಶದೊಳಗೆ ಯಾವುದೇ ಸಂಕಷ್ಟ ಎದುರಾದರೂ ಯಾವುದೇ ಸಮಯವಿರಲಿ ಸಂಘವು ಕರೆ ಕೊಟ್ಟ ತಕ್ಷಣ ಸ್ಥಳಕ್ಕೆ ತೆರಳಿ ಸಹಾಯ ಹಸ್ತ ಚಾಚುವುದು ಇದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ, ಇಲ್ಲದಿದ್ದರೆ ನಿಮ್ಮನ್ನು ಮಾನಸಿಕ ಸ್ಥಿಮೀತ ಕಳೆದುಕೊಂಡ ತಂಡವೆಂದು ಜನರೇ ಕರೆಯುವ ದಿನ ದೂರವಿಲ್ಲ ಎಂದರು.
ರಾಜ್ಯದಾದ್ಯಂತ ಸಂಘದ ಸಮವಸ್ತ್ರಕ್ಕೆ ಸಾರ್ವಜನಿಕವಾಗಿ ಬೆಂಕಿ ಹಚ್ಚುತ್ತೇವೆ ಎಂದು ಹೇಳಿಕೆ ನೀಡುವ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ನಲಪಾಡ ಅವರು ಈ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಇಲ್ಲದಿದ್ದರೆ ನಿಮ್ಮ ಹೇಳಿಕೆಯ ತೀವ್ರತೆ ಯಾವ ಮಟ್ಟಕ್ಕೆ ಪೆಟ್ಟು ಕೊಡುತ್ತದೇ ಎಂಬುದನ್ನು ಬರುವ ಚುನಾವಣೆಯಲ್ಲಿ ನೀವೇ ನೋಡುತ್ತಿರ ಎಂದು ಸವಾಲು ಹಾಕಿದರು.
ಒಂದು ವಿದ್ಯಾರ್ಥಿ ಸಂಘಟನೆಯನ್ನು ರಾಜಕೀಯ ದಾಳವಾಗಿ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಜೊತೆಗೆ ಸಂಘದ ಸಮವಸ್ತ್ರಕ್ಕೆ ಬೆಂಕಿ ಇಡುವ ಮೂಲಕ ರಾಷ್ಟ್ರೀಯತೆಗೆ ಅವಮಾನ ಮಾಡುತ್ತಿರುವುದು ಪುರಾಣದ ಕಥೆಯಲ್ಲಿ ಭಸ್ಮಾಸುರ ಹೇಗೆ ತನ್ನನ್ನು ತಾನು ಸುಟ್ಟುಕೊಂಡನೋ ಹಾಗೆಯೇ ನಿಮ್ಮನ್ನು ನೀವು ರಾಜಕೀಯವಾಗಿ ಸುಟ್ಟುಕೊಳ್ಳಲು ವೇದಿಕೆ ಸಿದ್ಧತೆ ಮಾಡಿಕೊಳ್ಳುಲು ತಯಾರಿ ಮಾಡಿಕೊಡಂತೆ ಭಾಸವಾಗುತ್ತಿದೆ ಎಂದು ತಮ್ಮ ಆಕ್ರೋಶವನ್ನು ತೀವ್ರವಾಗಿ ಹೊರಹಾಕಿದ್ದಾರೆ.
ತಮ್ಮ ವಿಶ್ವಾಸಿ,
ಎಸ್. ಎಸ್. ಜ್ಯೋತಿಪ್ರಕಾಶ್,
ಮಾಜಿ ಅಧ್ಯಕ್ಷರು,
ಎ.ಪಿ.ಎಂ.ಸಿ ಹಾಗೂ ಸೂಡಾ,
ಶಿವಮೊಗ್ಗ.