ಐ.ಸಿ.ಎ.ಆರ್., ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ಆರೋಗ್ಯ ಮತ್ತು ನೈರ್ಮಲ್ಯ ಕುರಿತ ಜಾಗೃತಿ ಕಾರ್ಯಕ್ರಮವನ್ನು ಶಿವಮೊಗ್ಗ ತಾಲ್ಲೂಕಿನ ಮಲ್ಲವಗೊಪ್ಪ ಗ್ರಾಮದ ಜೈ ಸೇವಾಲಾಲ್ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಮೊದಲಿಗೆ ಸ್ಯಾನಿಟಟೈಸರ್ ಬಗ್ಗೆ ಮಾಹಿತಿ ನೀಡಿ ಮುಖಗವಸಗಳನ್ನು ವಿತರಿಸಲಾಯಿತು. ನಂತರ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿಗಳಾದ ಡಾ. ಜ್ಯೋತಿ ಎಂ. ರಾಠೋಡ್‍ರವರು ಜನರಿಗೆ ಆರೋಗ್ಯದ ಪ್ರಾಮುಖ್ಯತೆ ಮತ್ತು ಆಹಾರ ಪದ್ಧತಿಗಳಲ್ಲಿ ಹಣ್ಣು ಮತ್ತು ತರಕಾರಿಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಶುಚಿತ್ವವನ್ನು ಪಾಲಿಸುವುದು ಹಾಗೂ ಕನಿಷ್ಟ 20 ಸೆಕೆಂಡುಗಳ ಕಾಲ ಆಗಾಗ್ಗೆ ಕೈತೊಳೆಯುವ ಅಭ್ಯಾಸವನ್ನು ರೂಡಿಸಿಕೊಳ್ಳುವುದು ಅತ್ಯಗತ್ಯ ಎಂದು ತಿಳಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಗಳಾದ ರೇಖಾ, ಎಂ. ವಿ. ರವರು ಮಾತನಾಡಿ 60 ವರ್ಷದ ನಂತರದ ವೃದ್ಧರು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ತಿಳಿಸಿದರು, ಕೃಷಿ ಚಟುವಟಿಕೆಗಳಲ್ಲಿಯೂ ಸಹ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಅನಾರೋಗ್ಯದಲ್ಲಿರುವ ಜನರಿಂದ ಆದಷ್ಟು ದೂರವಿರಬೇಕು ಎಂದು ತಿಳಿಸಿದರು. ಮುಂದುವರೆದು ಕಾರ್ಯಕ್ರಮದಲ್ಲಿ ಕೈ ತೊಳೆಯುವ ಬಗ್ಗೆ, ಪ್ರಾತ್ಯಕ್ಷಿಕೆ ಮುಖಾಂತರ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜ, ಶಿವಮೊಗ್ಗದ ನಿರ್ದೇಶಕರು ಹಾಗೂ ಭೂ ನ್ಯಾಯ ಮಂಡಳಿ ಸದಸ್ಯರಾದ, ಶ್ರೀ. ವೆಂಕಟೇಶ್‍ರವರು ಮತ್ತು ಶ್ರೀಮತಿ ಧನಲಕ್ಷ್ಮಿ, ಸ್ತ್ರೀಶಕ್ತಿ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. ಒಟ್ಟು 30 ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.

error: Content is protected !!