ಶಿವಮೊಗ್ಗ. ಜೂನ್.18: ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಹಾಗೂ ವಿತರಿಸುವ ಪಡಿತರದಲ್ಲಿ ಸಂಪೂರ್ಣ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಜೂನ್ 2019ರಿಂದ ಗಣಕೀಕೃತಗೊಳಿಸುವ ಪ್ರಕ್ರಿಯೆಯನ್ನು ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಜಾರಿಗೆ ತರಲಾಗಿದೆ.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಆಧಾರ್ ಇ-ಏಙಅ ಮಾಡುವ ಕಾರ್ಯವನ್ನು ಜೂನ್-2019 ರಿಂದ ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಜಾರಿಗೊಳಿಸಲಾಗುವುದು. ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ PಔS ವ್ಯವಸ್ಥೆ ಜಾರಿಯಲ್ಲಿದ್ದು, ಈ ಮೂಲಕವೇ ಫಲಾನುಭವಿಗಳ ಆಧಾರ್ ಇ-ಏಙಅ ಮಾಡಲು ತಂತ್ರಾಂಶವನ್ನು ರೂಪಿಸಿ ಜಾರಿಗೊಳಿಸಲಾಗಿದೆ. ನ್ಯಾಯಬೆಲೆ ಅಂಗಡಿಗೆ ನಿಯೋಜಿಸಿರುವ ಪಡಿತರ ಚೀಟಿಗಳ ಎಲ್ಲಾ ಸದಸ್ಯರು ಮುಂದಿನ ಎರಡು ತಿಂಗಳ ಅವಧಿಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಅವರವರ ಬೆರಳಚ್ಚು ನೀಡಿ ಇ-ಏಙಅ ಪೂರ್ಣಗೊಳಿಸುವುದು.
ಈ ಪ್ರಕ್ರಿಯೆಯು ಜುಲೈ ಅಂತ್ಯದವರೆಗೂ ನಡೆಯಲಿದ್ದು, ಈ ಅವಧಿಯಲ್ಲಿ ಎಲ್ಲಾ ಫಲಾನುಭವಿಗಳು ತಮ್ಮ ಬಯೋ (ಆಧಾರ್ ಹಾಗೂ ಬೆರಳಚ್ಚು ನೋಂದಣಿ) ದೃಢೀಕರಣವನ್ನು ಕಡ್ಡಾಯವಾಗಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

error: Content is protected !!