ಜಿಎಸ್ಟಿ ಮತ್ತು ಆದಾಯ ತೆರಿಗೆಗೆ ಸಂಬಂಧಪಟ್ಟ ಬಜೆಟ್Àಗೆ ಪೂರ್ವಭಾವಿಯಾಗಿ ಮನವಿಯನ್ನು ಇಂದು ಬೆಳಿಗ್ಗೆ ಸಂಸದರಾದ ಬಿ.ವೈ.ರಾಘವೇಂದ್ರ ಅವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ಆದಾಯ ತೆರಿಗೆ ಸಂಬಂಧಪಟ್ಟಂತೆ ತೆರಿಗೆ ನಿರ್ಧಾರಣಾ ಸಂದರ್ಭದಲ್ಲಿ ಆಗುತ್ತಿರುವ ನ್ಯೂನ್ಯತೆಗಳನ್ನು ಹೋಗಲಾಡಿಸುವ ವಿಚಾರವಾಗಿ ಹಾಗೂ ಜಿಎಸ್ಟಿ ಎಲ್ಲಾ ರಿಟನ್ಸ್ ಹಾಗೂ ಜಿಎಸ್ಟಿ ಪೊರ್ಟಲ್ನಿಂದ ಆಗುತ್ತಿರುವ ನ್ಯೂನ್ಯತೆಗಳನ್ನು ಅತೀ ಜರೂರಾರಿ ಸರಿಪಡಿಸಲು ಮತ್ತು ಇತ್ತೀಚಿನ ಕೋರ್ಟಿನ ಆದೇಶವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ವ್ಯಾಪಾರಸ್ಥರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ವ್ಯಾಪಾರಸ್ಥರು ಮಾಸಿಕವರದಿ ಸಲ್ಲಿಸಲು ತಡವಾದಲ್ಲಿ ಒಟ್ಟಾರೆ ತೆರಿಗೆಯ ಮೇಲೆ ವಿಧಿಸುವ ಬಡ್ಡಿ ಹಾಗೂ ದಂಡ ಕ್ರಮವನ್ನು ಕೂಡಲೇ ನಿಲ್ಲಿಸಬೇಕು. ಎಲ್ಲಾ ಹೊಸ ಕಾನೂನುಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ, ಬಿಟ್ಟು ಹೋದ ವಹಿವಾಟುಗಳನ್ನು ಮರುಪರಿಶೀಲಿಸುವ ರಿವೈಜ್ ರಿಟನ್ಸ್ ಫಾರಂಗಳನ್ನು ಸಲ್ಲಿಸುವ ವಿಧಾನವನ್ನು ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ. ಜಿಎಸ್ಟಿಯಲ್ಲಿ ಮಾತ್ರ ಈ ರೀತಿಯ ವ್ಯವಸ್ಥೆ ಇಲ್ಲಿರುವುದು ವರ್ತಕರಿಗೆ ದೊಡ್ಡ ಸಮಸ್ಯೆಯಾಗಿದೆ. ಮತ್ತು ಸೇವಾತೆರಿಗೆ ಮತ್ತು ಇತರೆ ಕೇಂದ್ರೀಯ ತೆರಿಗೆಗಳು, ಸರಕು ಹಾಗೂ ಸೇವಾ ತೆರಿಗೆಗಳಲ್ಲಿ ವಿಲೀನಗೊಂಡಿರುವುದರಿಂದ ಈ ಎಲ್ಲಾ ತೆರಿಗೆಗಳಲ್ಲಿನ ಕಾನೂನಿನ ಸಮಸ್ಯೆಗಳನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಒನ್ ಟೈಂ ಸೆಟಲ್ಮೆಂಟ್ ಯೋಜನೆಯನ್ನು ಜಾರಿಗೊಳಿಸಲು ಕೋರಲಾಗಿದೆ. ಈಗಾಗಲೇ ಕರ್ನಾಟಕ ಸರ್ಕಾರ ವ್ಯಾಟ್ ಕರಸಮದಾನ ಸ್ಕೀಂನ್ನು ಬಿಡುಗೊಳಿಸಿದೆ. ಅದೇ ರೀತಿ ಕೇಂದ್ರದಲ್ಲಿಯೂ ಯೋಜನೆಯನ್ನೂ ರೂಪಿಸಿ ಕಾನೂನುಗಳನ್ನು ಜಾರಿಗೊಳಿಸಲು ಮನವಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಅಧ್ಯಕ್ಷರಾದ ಜೆ.ಆರ್.ವಾಸುದೇವ್ ತೆರಿಗೆ ಸಮಿತಿಯ ಛೇರ್ಮನ್ ಯು.ಮಧುಸೂಧನ್ ಐತಾಳ್, ಕಾರ್ಯದರ್ಶಿ ಬಿ.ಆರ್.ಸಂತೋಷ್, ಸಾರ್ವಜನಿಕ ಸಂಪರ್ಕಾದಿಕಾರಿ ಜಿ.ವಿಜಯ್ಕುಮಾರ್, ಉಪಾಧ್ಯಕ್ಷರುಗಳಾದ ಬಿ.ರುದ್ರೇಶ್, ಎಸ್.ಎಸ್.ಉದಯ್, ಎಸ್.ಜಿ.ಗೋಪಾಲ್, ಮಂಜಪ್ಪ, ಎನ್.ಗೋಪಿನಾಥ್, ಡಿ.ಎಸ್.ಅರುಣ್, ಸುಕುಮಾರ್, ವಸಂತ್ ಹೋಬಳಿದಾರ್, ಎಂ.ರಾಜು, ಲಕ್ಷ್ಮೀಕಾಂತ್, ಸಂದೀಪ್, ಅಶ್ವಥ್ನಾರಾಯಣ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.