ಶಿವಮೊಗ್ಗ: ಆಟೋ ಮೊಬೈಲ್ ಕ್ಷೇತ್ರದಲ್ಲಿ ನಿರಂತರವಾಗಿ ಪ್ರಗತಿ ಆಗುತ್ತಿರುವ ಕಾರಣ ಗ್ರಾಹಕರಿಗೆ ಅಗತ್ಯವಿರುವ ಅತ್ಯಾಧುನಿಕ ಸೌಕರ್ಯದ ಹೊಸ ವಾಹನಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತಿವೆ. ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗಲಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ನಗರದ ಅರವಿಂದ ಮೋಟಾರ್ಸ್‌ ಕಚೇರಿಯಲ್ಲಿ ಟಾಟಾ ಮೋಟಾರ್ಸ್‌ ಸಹಯೋಗದಲ್ಲಿ ಆಯೋಜಿಸಿದ್ದ ಟಾಟಾ ಏಸ್ ಗೋಲ್ಡ್ ಹಾಗೂ ಇಂಟ್ರಾ ವಿ20 ವಾಹನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಂತ್ರಜ್ಞಾನ ಮುಂದುವರೆದಂತೆ ವಾಹನ ಉದ್ಯಮ ಕ್ಷೇತ್ರದಲ್ಲೂ ಪರಿಸರ ಸ್ನೇಹಿ ವಾಹನಗಳ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ. ಮಾಲಿನ್ಯ ಪ್ರಮಾಣ ಕಡಿಮೆ ಮಾಡುವ ದೃಷ್ಠಿಯಿಂದ ಹೊಸ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಉದ್ಯಮ ಕ್ಷೇತ್ರದಲ್ಲಿ ವಿಶ್ವಾಸರ್ಹ ಸೇವೆಯು ಅತ್ಯಂತ ಮುಖ್ಯ. ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಕೆಲಸ ಮಾಡಲು ಮುಂದಾಗಬೇಕು. ಟಾಟಾ ಸಂಸ್ಥೆಯು ಗ್ರಾಹಕರು ಹಾಗೂ ವಿತರಕರಿಗೆ ಪೂರಕವಾಗಿ ಉತ್ತಮ ಸೇವೆ ನೀಡಲು ಕೆಲಸ ಮಾಡುತ್ತಿದೆ ಎಂದರು.
ಸೇಲ್ಸ್ ಮ್ಯಾನೇಜರ್ ಅಂಟೋನಿ ಮಾತನಾಡಿ, ಆಧುನಿಕ ತಂತ್ರಜ್ಞಾನದೊಂದಿಗೆ ಹೊಸ ಹೊಸ ಸೌಲಭ್ಯಗಳನ್ನು ಅಳವಡಿಸಿಕೊಂಡು ಎರಡು ಮಾದರಿಯ ವಾಹನಗಳನ್ನು ಟಾಟಾ ಸಂಸ್ಥೆ ಬಿಡುಗಡೆ ಮಾಡಿದೆ. ಗ್ರಾಹಕರಿಗೆ ವಾರ್ಷಿಕ ಸಾವಿರಾರು ರೂ.ಗಳನ್ನು ಉಳಿಸುತ್ತದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ವಹಣೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಹಾಗೂ ಗ್ರಾಹಕರನ್ನು ಅಭಿನಂದಿಸಲಾಯಿತು.
ಅರವಿಂದ್ ಮೋಟಾರ್ಸ್‌ ನ ಪ್ರತಾಪ್, ಉದಯ್, ಭಗತ್ ಟೈರ್ಸ್‌ ನ ರಾಜೇಶ್ ಭಗತ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!