News Next

ಶಿವಮೊಗ್ಗ ರಂಗಾಯಣದ ವತಿಯಿಂದ ರಂಗ ಸಂಗೀತ, ರೆಪರ್ಟರಿ ನಾಟಕ ಪ್ರದರ್ಶನ: ಸಂದೇಶ ಜವಳಿ

ಶಿವಮೊಗ್ಗ, ಸೆ.16 : ಶಿವಮೊಗ್ಗ ರಂಗಾಯಣದ ವತಿಯಿಂದ ಸೆಪ್ಟಂಬರ್ 18 ಮತ್ತು 19ರಂದು ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಏಕವ್ಯಕ್ತಿ ನಾಟಕ ಪ್ರದರ್ಶನ, ಡಾ.ಬಿ.ವಿ.ಕಾರಂತರ ಜನ್ಮದಿನಾಚರಣೆ ನೆನಪಿನಲ್ಲಿ ರೆಪರ್ಟರಿಯ ಹೊಸ ನಾಟಕ ಪ್ರದರ್ಶನ ಮತ್ತು ರಂಗಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನಿರ್ದೇಶಕ ಸಂದೇಶ ಜವಳಿ ಅವರು ತಿಳಿಸಿದರು.

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೆ.18ರಂದು ಶನಿವಾರ ಸುವರ್ಣ ಸಾಂಸ್ಕøತಿಕ ಭವನದಲ್ಲಿ ಶಶಿಧರ್ ಭಾರಿಘಾಟ್ ರಚನೆಯ ಸ್ವಾಮಿ ಉಮಾಶಂಕರ್ ನಿರ್ದೇಶನದ ಪ್ರಸಿದ್ಧ ನಾಟಕ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಅಭಿನಯದ ‘ಸಾಯುವನೇ ಚಿರಂಜೀವಿ’ ಏಕವ್ಯಕ್ತಿ ನಾಟಕದ 118ನೇ ಪ್ರದರ್ಶನ ನಡೆಯಲಿದೆ

ಸೆ.19ರಂದು ಭಾನುವಾರ ಸಂಜೆ 6ಗಂಟೆಗೆ ಡಾ.ಬಿ.ವಿ.ಕಾರಂತರ ಜನ್ಮದಿನಾಚರಣೆಯ ಅಂಗವಾಗಿ ಬಸವಲಿಂಗಯ್ಯ ಹಿರೇಮಠ್ ಮತ್ತು ಕಲಾವಿದರು, ಧಾರವಾಡ ಇವರಿಂದ ‘ರಂಗಸಂಗೀತ’ ಕಾರ್ಯಕ್ರಮ ನಡೆಯಲಿದೆ.

ಸಂಜೆ 7ಗಂಟೆಗೆ ಶಿವಮೊಗ್ಗ ರಂಗಾಯಣದ ಹೊಸ ರಂಗಪ್ರಯೋಗÀ ‘ಹತ್ಯಾಕಾಂಡ-ವಿದುರಾಶ್ವಥದ ವೀರಗಾಥೆ’ ನಾಟಕ ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಪ್ರೊ.ಭೀಮಸೇನ ಆರ್, ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಉದ್ಘಾಟಿಸಲಿದ್ದಾರೆ. ರಂಗಸಮಾಜದ ಸದಸ್ಯರಾದ ಆರ್.ಎಸ್.ಹಾಲಸ್ವಾಮಿ ಹಾಗೂ ಪ್ರಭುಕಪ್ಪಗಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಭಾ ಕಾರ್ಯಕ್ರಮದ ನಂತರ ಡಾ.ಬೇಲೂರು ರಘುನಂದನ್ ರಚನೆಯ ಕೃಷ್ಣಮೂರ್ತಿ ಕವತ್ತಾರ್ ಸಂಗೀತ, ವಿನ್ಯಾಸ ಹಾಗೂ ನಿರ್ದೇಶನದ ‘ಹತ್ಯಾಕಾಂಡ’ ನಾಟಕವು ಪ್ರದರ್ಶನಗೊಳ್ಳಲಿದೆ.

ನಾಟಕಕ್ಕೆ ಪ್ರಸನ್ನ ವೈದ್ಯ ಮತ್ತು ರಾಘವೇಂದ್ರ ಪ್ರಭು ಎಂ.ಯು. ಇವರ ಸಂಗೀತ ನಿರ್ವಹಣೆ, ವಸ್ತ್ರ ವಿನ್ಯಾಸ ಮತ್ತು ಪರಿಕರ ನಿರ್ಮಾಣ ಪ್ರಶಾಂತ್ ಕುಮಾರ್, ಬೆಳಕಿನ ನಿರ್ವಹಣೆಯಲ್ಲಿ ಶಂಕರ್ ಕೆ ಬೆಳಲಕಟ್ಟೆ, ವಸ್ತ್ರವಿನ್ಯಾಸ ಸಹಾಯ ರಂಜಿತ ಆರ್ ಮಾಡಿದ್ದಾರೆ.

ರಂಗಾಯಣ ಶಿವಮೊಗ್ಗ ರೆಪರ್ಟರಿಯ ಕಲಾವಿದರಾದ ಪ್ರಸನ್ನಕುಮಾರ್‍ಆರ್, ನಿತಿನ್ ಡಿ.ಆರ್. ರವಿಕುಮಾರ್ ಎಸ್.ಎಮ್, ಸುಜಿತ್ ಕಾರ್ಕಳ, ಚಂದನ್ ಎನ್, ಶರತ್ ಬಾಬು ಎಂ.ಎಲ್, ಮಹಾಬಲೇಶ್ವರ್ ಬಿ.ಕೆ, ಸವಿತಾ ಆರ್ ಕಾಳಿ, ರಂಜಿತ ಆರ್, ದೀಪ್ತಿ ಎಮ್.ಹೆಚ್., ಕಾರ್ತಿಕ ಕಲ್ಲುಕುಟಿಕರ್ ಇವರುಗಳು ನಾಟಕದಲ್ಲಿ ಅಭಿನಯಿಸಿದ್ದಾರೆ.
ಕೋವಿಡ್-19ರ ಹಿನ್ನೆಲೆಯಲ್ಲಿ ಪ್ರೇಕ್ಷಕರು ಸರ್ಕಾರಿ ಮಾರ್ಗಸೂಚಿ ಪ್ರಕಾರ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕೋರಲಾಗಿದೆ. ಟಿಕೆಟ್ ಒಂದಕ್ಕೆ ರೂ.30 ದರವನ್ನು ನಿಗಧಿಪಡಿಸಲಾಗಿದೆ. ಟಿಕೆಟ್‍ಗಳು ರಂಗಾಯಣ ಕಛೇರಿ, ಸುವರ್ಣ ಸಾಂಸ್ಕøತಿಕ ಭವನ, ಹೆಲಿಪ್ಯಾಡ್ ಹತ್ತಿರ, ಅಶೋಕನಗರ, ಶಿವಮೊಗ್ಗ ದೂರವಾಣಿ: 08182-256353 ಇಲ್ಲಿ ದೊರೆಯಲಿವೆ. ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂದೇಶ್ ಜವಳಿ ಕೋರಿದರು.

ರಂಗ ಸಮಾಜದ ಸದಸ್ಯರಾದ ಆರ್.ಎಸ್.ಹಾಲಸ್ವಾಮಿ ಮತ್ತು ರಂಗ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಚಾರ ಸಾಮಾಗ್ರಿಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

error: Content is protected !!