ಶಿವಮೊಗ್ಗ : ಜೂನ್ 15 : ಶಿವಮೊಗ್ಗ ತಾಲೂಕಿನ ಅನುದಾನರಹಿತ ಪ್ರಾಥಮಿಕ ಶಾಲೆಗಳ ಆಡಳಿತ ಮಂಡಳಿಯವರು ಸಂಬಂಧಿಸಿದ ಶಾಲೆಗಳ ಚಾಲ್ತಿ ವರ್ಷದ ಮಾನ್ಯತೆ ನವೀಕರಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಈ ವಿಷಯದ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅನೇಕ ಬಾರಿ ಸೂಚನೆ ನೀಡಿದ್ದಾಗ್ಯೂ ಸಂಬಂಧಿಸಿದ ಶಾಲೆಗಳ ಮುಖ್ಯಸ್ಥರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುತ್ತಾರೆ. ಆದ್ದರಿಂದ ಶಿವಮೊಗ್ಗ ತಾಲೂಕಿನಲ್ಲಿರುವ ಶ್ರೀ ರವಿಶಂಕರ ವಿದ್ಯಾಮಂದಿರ, ಜೆ.ಹೆಚ್.ಪಟೇಲ್ ಬಡಾವಣೆ ಶಿವಮೊಗ್ಗ, ಹೊಂಗಿರಣ ಪ್ರಾಥಮಿಕ ಶಾಲೆ ಹನಸವಾಡಿ, ಮದೀನ್ ಹಿರಿಯ ಪ್ರಾಥಮಿಕ ಶಾಲೆ ಟ್ಯಾಂಕ್ ಮೊಹಲ್ಲ, ಟಿಪ್ಪುಸುಲ್ತಾನ್ ಉರ್ದು ಪ್ರಾಥಮಿಕ ಶಾಲೆ ಟಿಪ್ಪುನಗರ, ಅಲ್ ಮಹಮೂದ್ ಹಿರಿಯ ಪ್ರಾಥಮಿಕ ಶಾಲೆ, ಆರ್.ಎಂ.ಎಲ್.ನಗರ, ಐಡಿಯಲ್ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾನಗರ, ಕನಕ ಹಿರಿಯ ಪ್ರಾಥಮಿಕ ಶಾಲೆ ಎಂ.ಕೆ.ಕೆ.ರಸ್ತೆ, ಕಿಡ್ಡೀಸ್ ಹಿರಿಯ ಪ್ರಾಥಮಿಕ ಶಾಲೆ ಎಲ್.ಬಿ.ಎಸ್.ನಗರ, ಕೃಷ್ಣ ಪ್ರಾಥಮಿಕ ಶಾಲೆ ಹಾರೋಬೆನವಳ್ಳಿ, ಲಿಟ್ಲ್ ಲಾಡ್ರ್ಸ ಹಿರಿಯ ಪ್ರಾಥಮಿಕ ಶಾಲೆ ಕಾಶೀಪುರ, ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆ ಮಂಡಘಟ್ಟ, ವೀರಭದ್ರೇಶ್ವರ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆ ತ್ಯಾಜವಳ್ಳಿ, ಆದಿಚುಂಚನಗಿರಿ ಹಿರಿಯ ಪ್ರಾಥಮಿಕ ಶಾಲೆ ಶರಾವತಿನಗರ, ಯೂನಿಟಿ ಹಿರಿಯ ಪ್ರಾಥಮಿಕ ಶಾಲೆ ಆಯನೂರು, ಸವಿನಯ ಹಿರಿಯ ಪ್ರಾಥಮಿಕ ಶಾಲೆ ಸಿದ್ಧೇಶ್ವರ ನಗರ, ಇಕ್ಲಾಸ್ ಹಿರಿಯ ಪ್ರಾಥಮಿಕ ಶಾಲೆ ಆರ್.ಎಂ.ಎಲ್.ನಗರ, ಜ್ಞಾನದಾಯಿನಿ ಶಾಲೆ ಅನುಪಿನಕಟ್ಟೆ, ಶರಾವತಿ ಇಂಗ್ಲೀಷ್ ಪ್ರಾಥಮಿಕ ಶಾಲೆ ಶರಾವತಿನಗರ ಹಾಗೂ ಎಜುಕೇರ್ ಹಿರಿಯ ಪ್ರಾಥಮಿಕ ಶಾಲೆ ಕೀರ್ತಿನಗರ ಶಿವಮೊಗ್ಗ ಈ ಶಾಲೆಗಳ ಮುಖ್ಯಸ್ಥರು ಕೂಡಲೇ ನಿಯಮಾನುಸಾರ ಶಾಲಾ ಪರವಾನಿಗೆ ನವೀಕರಿಸಿಕೊಳ್ಳುವಂತೆ ಶಿವಮೊಗ್ಗ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.
ನಿಗದಿಪಡಿಸಿದ ಕಾಲಾವಧಿಯೊಳಗಾಗಿ ಪರವಾನಿಗೆಯನ್ನು ನವೀಕರಿಸಿಕೊಳ್ಳದಿದ್ದಲ್ಲಿ ಆಗುವ ಅನಾಹುತಗಳಿಗೆ ಶಾಲಾ ಆಡಳಿತ ಮಂಡಳಿಯವರೆ ಹೊಣೆಗಾರರಾಗಿರುತ್ತಾರೆ. ಅಲ್ಲದೇ ಈ ಅನಾಹುತಗಳಿಗೆ ಕಚೇರಿಯಾಗಲೀ, ಇಲಾಖೆಯಾಗಲಿ ಹೊಣೆಗಾರರಾಗಿರುವುದಿಲ್ಲ ಎಂಬುದನ್ನು ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತರಲಾಗಿದೆ ಎಂದವರು ತಿಳಿಸಿದ್ಧಾರೆ.