ಅಡಿಕೆ ಹಾಳೆಯನ್ನು ರಾಸಾಯನಿಕದಿಂದ ಹದಗುಳಿಸಿ ಚಪ್ಪಲಿ ಹಾಗೂ ಇನ್ನಿತರ ವಸ್ತುಗಳನ್ನು ತಯಾರಿಸುತ್ತಿರುವ ಸುರೇಶ್ ಮೈತಲಿ ದಂಪತಿಗಳು

ಮಲೆನಾಡಿನ ಜೀವನಾಡಿ ಅಡಕೆ. ಅಡಕೆ ಕೇವಲ ತಿನ್ನುವ ವಸ್ತು, ಮಂಗಳಕಾರ್ಯಗಳಿಗೆ ಅವಶ್ಯ ಎಂದು ಮಾತ್ರ ನಾವು ಅಂದುಕೊಂಡಿದ್ದೆವು. ಅದರ ತ್ಯಾಜ್ಯಗಳಿಂದ ಅಂದರೆ, ಅಡಕೆ ಹಾಳೆಯಿಂದ ತಟ್ಟೆ, ಸಿಪ್ಪೆಯಿಂದ ಗೊಬ್ಟರ, ಮಳೆಗಾಲಕ್ಕೆ ಭದ್ರವಾದ ಟೊಪ್ಪಿಗೆ ತಯಾರಿಸುತ್ತ ಬಂದಿದ್ದು, ಗ್ರಾಮೋದ್ಯೋಗವಾಗಿ ಯಶಸ್ಸನ್ನು ಸಹ ಕಾಣುತ್ತಿದೆ.

ಆದರೆ ಶಿವಮೊಗ್ಗದ ಸುರೇಶ್‌ ದಂಪತಿಗಳು ಒಂದು ಹೆಜ್ಜೆ ಮುಂದೆ ಹೋಗಿ ಅಡಕೆ ಹಾಳೆಯನ್ನು ಪ್ರಾಣಿಗಳ ಚರ್ಮದಂತೆ ಹದ ಮಾಡಿ ಅದರಲ್ಲಿ ಪಾದರಕ್ಷೆಗಳನ್ನು ಇನ್ನತರ ವಸ್ತುಗಳನ್ನು ತಯಾರಿ ಮಾಡುತ್ತಿದ್ದಾರೆ. ಅಡಕೆ ಮರದ ಹಾಳೆಯನ್ನು ಚರ್ಮದಂತೆ ನುಣುಪು ಮಾಡಿ ಹ್ಯಾಂಡ್‌ ಬ್ಯಾಗ್‌, ಡೈರಿಗಳ ಮುಖಪುಟ, ಅಲಂಕಾರಿಕಾ ನೆಲಹಾಸು, ಅಷ್ಟೇ ಏಕೆ, ಅಡಕೆ ಹಾಳೆಯಲ್ಲಿ ಚಪ್ಪಲಿಗಳನ್ನು ತಯಾರಿ ಮಾಡಲಾಗುತ್ತಿದೆ. ಅಚ್ಚರಿ ಎನಿಸಿದರೂ ಸತ್ಯ.

ಮೂಲತಃ ಅಡಕೆ ಬೆಳೆಗಾರರಾದ ಸುರೇಶ್‌ ಶಿವಮೊಗ್ಗದಲ್ಲಿ ಅಡಕೆ ಹಾಳೆಗಳ ಉತ್ಪನ್ನಗಳನ್ನು ತಯಾರಿಸುವ ಕಂಪನಿ ಆರಂಭಿಸಿದ್ದಾರೆ. ಇವರ ಏಕಾಂಗಿ ಹೋರಾಟ ನಮಗೆ ಅಚ್ಚರಿ ಮೂಡಿಸುತ್ತದೆ. ಅಡಕೆ ತೋಟದಲ್ಲಿ ಚೆಲ್ಲಾಪಿಲ್ಲಿಯಾಗಿ ಬೀಳುವ ಅಡಕೆ ಹಾಳೆಯನ್ನು ಹದ ಮಾಡಿ ರಾಸಾಯನಿಕ ಬಳಸಿ ಯಾವ ಕಾಲದಲ್ಲಿಯು ಚಪ್ಪಲಿ ತನ್ನ ಮೂಲಸ್ವರೂಪ ಕಳೆದುಕೊಳ್ಳದ ರೀತಿಯಲ್ಲಿ ಚಪ್ಪಲಿ ತಯಾರಿಸುತ್ತಾರೆ.

ಅದಕ್ಕೀಗ ಎಂತಹ ಬೇಡಿಕೆ ಬಂದಿದೆ ಎಂದರೆ ಇಂಗ್ಲೆಂಡ್‌, ಹಾಲೆಂಡ್‌, ಯುರೋಪ್‌, ನೆದರ್‌ಲ್ಯಾಂಡ್‌ ದೇಶಗಳಿಗೂ ರಫ್ತಾಗುತ್ತಿದೆ. ಆಕಾಶದೆತ್ತರಕ್ಕೆ ಬೆಳೆಯುವ ಅಡಕೆ ಗೊನೆಗೆ ಭಾರಿ ಬೆಲೆಯಾದರೆ ಅದರಿಂದ ಕೆಳಗೆ ಬೀಳುವ ಅಡಕೆ ಹಾಳೆಗೂ ಸುರೇಶ್‌ ತಾರಾಮೌಲ್ಯ ತಂದುಕೊಟ್ಟಿದ್ದಾರೆ. ಇವರ ವಾರ್ಷಿಕ ವಹಿವಾಟು ಅಡಕೆ ತಟ್ಟೆಗಳಿಗೆ 10 ಲಕ್ಷ ತಟ್ಟೆಗಳು ಮಾರಾಟ ಆಗುತ್ತವೆ. ಈಗ ಅಡಕೆ ಹಾಳೆಯಲ್ಲಿ ಚಪ್ಪಲಿ ತಯಾರಿಸುತ್ತಾರೆ.

ಕೇಂದ್ರ ಸರ್ಕಾರ ಇವರ ಯೋಜನೆಗೆ 20 ಲಕ್ಷ ರೂ. ಅನುದಾನ ನೀಡಿದೆ. ಹೊಸ ಹೊಸ ಯಂತ್ರಗಳನ್ನು ಬಳಸಿ ಅಡಕೆ ತೋಟದ ಅಡಕೆ ಹಾಳೆಗೂ ಸುರೇಶ್‌ ಬೆಲೆ ತಂದುಕೊಟ್ಟಿದ್ದಾರೆ.

ಸುರೇಶ್‌ ಎಸ್.ಆರ್.‌, ಅಡಕೆ ಹಾಳೆ ಉತ್ಪನ್ನಗಳ ತಯಾರಕರು ಮಾತನಾಡಿ ನಾವು ಮೂಲತಃ ಅಡಕೆ ಬೆಳೆಗಾರರು. ಅಡಕೆಗೆ ಯಾವಾಗಲೂ ಬೆಲೆ ಇರುವುದಿಲ್ಲ. ಅಡಕೆಯಲ್ಲಿಯು ಹೊಸ ಪ್ರಯತ್ನಗಳನ್ನು ಮಾಡಬೇಕಿದೆ. ನಾನು 2008ರಿಂದಲೂ ಇಂತಹ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಅಡಕೆ ಹಾಳೆ ತಟ್ಟೆ ಬಳಕೆ ಕುರಿತಂತೆ ಇದರ ಪರಿಸರ ಸ್ನೇಹಿಗಳ ಕುರಿತು ಜನರಿಗೆ ತಿಳವಳಿಕೆ ಮೂಡಿಸಬೇಕಿದೆ. ನನಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಉದ್ಯಮಕ್ಕೆ 20 ಲಕ್ಷ ರೂ. ನೆರವು ನೀಡಿದೆ.

ಮೈಥಿಲಿ, ಮಾತನಾಡಿ ನಾನು ನನ್ನ ಪತಿಯೊಂದಿಗೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ಎಲ್ಲರೂ ಸರ್ಕಾರಿ ಉದ್ಯೋಗ ಬಯಸಿದಾದರೆ ಸ್ವಯಂ ಉದ್ಯೋಗ ಮಾಡುವವರಾರು. ನಮಗೆ ಕಾಯಕ ಯಶಸ್ಸು ತಂದುಕೊಟ್ಟಿದೆ.ಎಂದರು.

ರಾಜೀವ್‌, ಅಡಕೆ ಬೆಳೆಗಾರರು ಮಾತನಾಡಿ
ಅಡಕೆ ತ್ಯಾಜ್ಯದಲ್ಲಿ ಚಪ್ಪಲಿ,ಬ್ಯಾಗ್, ಬುಕ್ ಬೈಂಡಿಂಗ್ ಇನ್ನಿತರ ವಸ್ತುಗಳನ್ನು ತಯಾರಿಸುವ ಪ್ರಯತ್ನ ವಿನೂತನ ಮತ್ತು ವಿಶಿಷ್ಟವಾದದ್ದು. ನಾವು ಇವೆಲ್ಲವನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.

ಪ್ರೋ. ಶಶಿಧರ್‌, ಕೃಷಿ ವಿವಿ, ಶಿವಮೊಗ್ಗ ಮಾತನಾಡಿ
ಅಡಕೆಯ ತ್ಯಾಜ್ಯ ಉಪಯೋಗಿಸುವ ಮತ್ತು ಅದನ್ನು ಬಳಸುವವರ ಸಂಖ್ಯೆ ಕಡಿಮೆ ಇದೆ. ಚರ್ಮದ ಚಪ್ಪಲಿಗಳ ಬದಲು ಅಡಕೆ ಹಾಳೆಗಳಲ್ಲಿ ಚಪ್ಪಲಿ ತಯಾರಿಸಿ ಅದಕ್ಕೊಂದು ಮೌಲ್ಯ ತಂದುಕೊಡುತ್ತಿರುವ ಸುರೇಶ್‌ ಅವರ ಪ್ರಯತ್ನ ದೊಡ್ಡದು. ಇಂತಹ ಹೊಸ ಪ್ರಯೋಗಗಳು ಎಲ್ಲ ಕ್ಷೇತ್ರಗಳಲ್ಲಿ ನಡೆಯಬೇಕು.ಎಂದು ತಿಳಿಸಿದರು.

error: Content is protected !!