By: Lokesh jagannath
ಒಂದು ಕಾಲದಲ್ಲಿ ನಗರ ಮತ್ತುಗ್ರಾಮೀಣ ಪ್ರದೇಶಗಳಲ್ಲಿ ಬಿದಿರು, ಬೆತ್ತ, ಈಚಲು ಮರಗಳ ಉತ್ಪನ್ನಗಳಿಂದ ತಯಾರಿಸಿದ ಚಾಪೆ, ಬುಟ್ಟಿ, ಚಾದರಗಳನ್ನು ತಯಾರಿಸಲಾಗುತ್ತಿತ್ತು.ಅದರಿಂದ ಜೀವನವು ನಡೆಯುತ್ತಿತ್ತು.ಕಾಲ ಬದಲಾಗಿ ಎಲ್ಲ ಕಡೆಗಳಲ್ಲೂ ಪ್ಲಾಸ್ಟಿಕ್ ಆವರಿಸಿಬಿಟ್ಟಿತು.ಭೂಮಿಯಲ್ಲಿ ಕರಗದ, ಗೊಬ್ಬರವಾಗದ ಪ್ಲಾಸ್ಟಿಕ್ ಅನ್ನು ಬಳಸುವ ಅಲಂಕಾರಿಕೆಎಲ್ಲೆಡೆಯು ಪಸರಿಸುತ್ತಿದೆ.
ಇದಕ್ಕೆ ಪರ್ಯಾಯವಾಗಿ ಮಲೆನಾಡಿನಅಡಕೆ ಬೆಳೆಗಾರರು ಅಡಕೆ ಹಾಳೆ, ತಟ್ಟೆ, ದೊನ್ನೆಎಲ್ಲವನ್ನು ತಯಾರಿಸಿ ಪ್ಲಾಸ್ಟಿಕ್ಗೆ ಪರ್ಯಾಯ ಆಲೋಚನೆ ಮಾಡುತ್ತಿದ್ದಾರೆ.ಸೊರಬ ವಿಧಾನಸಭಾಕ್ಷೇತ್ರದ ತಾಳಗುಪ್ಪ ಸಮೀಪ ಕಣವಿನಮನೆಯ ನಿವಾಸಿ ತಿರುಮಲಶರ್ಮಒಂದು ಹೆಜ್ಜೆ ಮುಂದಕ್ಕೆ ಆಲೋಚನೆ ಅಡಕೆ ಹಾಳೆಗಳಲ್ಲಿ ಚಾಪೆ, ಹೂ ಕೊಯ್ಯುವ ಬುಟ್ಟಿ ಮುಂತಾದಅಲಂಕಾರಿಕ ವಸ್ತುಗಳನ್ನು ಬಳಸಿ ಮಾರುಕಟ್ಟೆಗೂ ಮುಂದಾಗಿದ್ದಾರೆ.ಲೋಕಲ್ ಫಾರ್ ವೋಕಲ್ಘೋಷಣೆಯೊಂದಿಗೆ ಮುನ್ನಡೆದಿದ್ದಾರೆ.ತಿರುಮಲಶರ್ಮಅವರಕಾಯಕಕ್ಕೆಇಡೀಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದೆ.
ತಿರುಮಲಶರ್ಮಾ, ಕಸೂತಿಕಾರರು ಮಾತನಾಡಿ ಹವಮಾನದ ವೈಪರೀತ್ಯದಿಂದಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಪರ್ಯಾಯ ಅಲೋಚನೆ ಅನಿವಾರ್ಯ.ನಮ್ಮ ತೋಟಗಳಲ್ಲಿ ಸುಲಭವಾಗಿ ಸಿಗುವ ಅಡಕೆ ಹಾಳೆಗಳನ್ನು ನೀರಿನಲ್ಲಿ ನೆನೆಸಿ ಅದರಲ್ಲಿದಾರತೆಗೆದು ಈ ರೀತಿಯ ಕಸೂತಿಗಳನ್ನು ಮಾಡುತ್ತಿದ್ದೇನೆ. ನಮ್ಮಗ್ರಾಮಾಂತರ ಪ್ರದೇಶಗಳಲ್ಲಿ ಮೊದಲುಬಳಕೆ ಮಾಡುವ ತಿಳವಳಿಕೆ ಮೂಡಿಸಬೇಕು.
ರಾಘವೇಂದ್ರ ಶರ್ಮ, ಪ್ರಗತಿಪರ ಕೃಷಿಕ ಮಾತನಾಡಿ ಕಲಾಕೃತಿಗಳನ್ನು ನಿರ್ಮಾಣ ಮಾಡುತ್ತಿರುವ ತಿರುಮಲಶರ್ಮ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಯಂತ್ರ ಬಳಸದೇ, ವಿದ್ಯುತ್ಉಪಯೋಗಿಸದೇ ಕೈಕಸುಗೆಯಿಂದಲೇ ಕಾಯಕದಲ್ಲಿ ನಿರತರಾಗಿದ್ದಾರೆ.ಎಂದರು.
ಲತಾ, ಗೃಹಿಣಿ ಮಾತನಾಡಿ ಅಡಕೆ ಹಾಳೆಯಲ್ಲಿ ವಿವಿಧ ಕಲಾಕೃತಿಗಳನ್ನು ತಯಾರಿಸುತ್ತಿದ್ದೇವೆ. ಇದುಜನರನ್ನುಆಕರ್ಷಿಸುತ್ತಿದೆ. ವಿಶೇಷವಾಗಿ ಅಲಂಕಾರಿಕ ವಸ್ತುಗಳ ಜನಮನ ಸೆಳೆಯುತ್ತಿವೆ ಎಂದರು
ಲಕ್ಷ್ಮೀಶ್, ಕಣವಿನಮನೆ ಮಾತನಾಡಿ ಭೂಮಿಯಲ್ಲಿಗೊಬ್ಬರವಾಗದ ಪ್ಲಾಸ್ಟಿಕ್ ಮುಂದೆ ಭಾರಿಅನಾಹುತಉಂಟುಮಾಡಲಿದೆ.ಅದಕ್ಕಾಗಿಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.ಅಡಕೆ ಹಾಳೆಯನ್ನು ಬಳಸಿ ದಿನೋಪಯೋಗಿ ಕಲಾಕೃತಿಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಇದುಜನರನ್ನು ಹೆಚ್ಚು ತಲುಪುತ್ತಿದೆ.