ಇತ್ತೀಚಿನ ದಿನಗಳಲ್ಲಿ ಹಿಂಗಾರ ತಿನ್ನುವ ಹುಳು (ತೀರ್ಥಬ ಮುಂಡೇ¯) ಕರ್ನಾಟಕ ಮತ್ತು ಕೇರಳ ಭಾಗದಲ್ಲಿ ಹೆಚ್ಚಾಗಿ ಕಂಡುಬಂದಿದೆ. ಹೊಂಬಾಳೆ ತಿನ್ನುವ ಕೀಟ ಅಥವಾ ಹೂಗೊಂಚಲಿನ ಕೀಟವೆಂದೇ ಹೆಸರುವಾಸಿಯಾಗಿರುವ ಈ ಕೀಟ, ಪತಂಗ ಜಾತಿಗೆ ಸೇರಿದೆ. ಸಾಮಾನ್ಯವಾಗಿ ಈ ಕೀಟದ ಹಾವಳಿಯು ಜನವರಿಯಿಂದ ಪ್ರಾರಂಭವಾಗಿ ಏಪ್ರಿಲ್ ತಿಂಗಳಿನವರೆಗೆ ಕಾಣಿಸಿಕೊಳ್ಳುತ್ತದೆ. ಹಿಂಗಾರ ತಿನ್ನುವ ಹುಳುವಿನಿಂದ ಶೇ. 10 ರಿಂದ 15 ರಷ್ಟು ಇಳುವರಿ ಕಡಿಮೆಯಾಗುತ್ತಿದೆ. ಈ ಹುಳಗಳ ಭಾದೆ 20 ವರ್ಷದ ಒಳಗಿನ ಮರಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಹುಳುಗಳು ಹಿಂಗಾರದ ಒಳಹೊಕ್ಕು ಬಲೆಗಳನ್ನು ನೇಯ್ದುಕೊಂಡು ಗಂಡು ಮತ್ತು ಹೆಣ್ಣು ಹೂಗಳನ್ನು ತಿನ್ನುತ್ತವೆ. ಹೂ ಅರಳುವ ಮೊದಲೇ ಅವುಗಳನ್ನು ತಿನ್ನುವುದರಿಂದ ಹೊಂಬಾಳೆ ಮೇಲೆ ಒತ್ತಡ ಬರದೆ ಹಿಂಗಾರ ಬಿಚ್ಚಿಕೊಳ್ಳುವುದಿಲ್ಲ. ಹಿಂಗಾರದ ಎಸಳುಗಳನ್ನು ಸೇರಿಸಿಕೊಂಡು ಬಲೆ ನೇಯ್ದು, ಹೂಗಳನ್ನು ತಿಂದು, ಹಿಕ್ಕಿಗಳನ್ನು ಅಲ್ಲಿಯೇ ವಿಸರ್ಜಿಸುವುದರಿಂದ ಹಿಂಗಾರ ಕೊಳೆಯುವುದಲ್ಲದೆ ಹುಳು ಸುರಂಗ ಮಾಡಿದ ಜಾಗಗಳಿಂದ ಅಂಟುದ್ರವ ಹೊರಕ್ಕೆ ಬರುತ್ತದೆ. ಹಾನಿಗೀಡಾದ ಹಿಂಗಾರದಲ್ಲಿ ನೇಯ್ದು ಬಲೆಗಳಿಂದ ಪರಾಗಸ್ಪಶರ್Àಕ್ಕೆ ಅಡ್ಡಿಯುಂಟಾಗುವುದಲ್ಲದೆ ಕಾಯಿ ಕಚ್ಚುವುದಿಲ್ಲ. ತೀವ್ರವಾಗಿ ಕೀಟ ಬಾಧಿಸಿದ ತೋಟಗಳಲ್ಲಿ ಎಳೆಯ ಕಾಯಿಗಳಲ್ಲಿಯೂ ಸಹ ಇದರಿಂದಾದ ಹಾನಿ ಕಾಣಿಸುತ್ತದೆ.
ಹತೋಟಿ ಕ್ರಮಗಳು:

  1. ಬಾಧೆಗೆ ಒಳಗಾಗಿರುವ ಹಿಂಗಾರಗಳನ್ನು ಗುರುತಿಸಿ ತೆಗೆಯಬೇಕು.
  2. ಮುಂಜಾಗ್ರತೆಯಾಗಿ ಮರಗಳಲ್ಲಿ ಹೊಂಬಾಳೆ ಬರುವ ಸಮಯದಲ್ಲಿ 2.0 ಮಿ.ಲೀ ಕ್ಲೋರೊಫೈರಿಫಾಸ್ 20 ಇ.ಸಿ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
  3. ಹಾನಿಗೊಳಗಾದ ಹಿಂಗಾರಗಳನ್ನು ಗುರುತಿಸಿ ಕೊಕ್ಕೆಯಿಂದ ಸೀಳಿ ಹಿಂಗಾರ ಅರಳುವಂತೆ ಮಾಡಿ ಮತ್ತು ಅರಳಿದ ಹಿಂಗಾರಕ್ಕೆ 2 ಮಿ. ಲೀ ಕ್ಲೋರೊಫೈರಿಫಾಸ್ 20 ಇ.ಸಿ ಅಥವಾ ಕ್ವಿನಾಲ್‍ಫಾಸ್ 25 ಇ.ಸಿ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.
  4. ಕೆಂಪು ಇರುವೆಗಳು ಅಥವಾ ಕೆಂಜಗಗಳು ಪರಭಷ್ಷಕ ಕೀಟ ಆಗಿರುವುದರಿಂದ ಸಂರಕ್ಷಿಸಿ, ಪ್ರೋತ್ಸಾಹಿಸಿದರೆ ಈ ಹುಳುವನ್ನು ಹತೋಟಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ: Dr. M. Ravikumar
Professor & Head,
Agricultural & Horticultural Research Station
Seebinakere Farm, Thirthahalli-577432
Shimoga District, KARNATAKA
Mobile: 9480838992, 9449535453

error: Content is protected !!