ಕೊಳೆ ರೋಗದ ಲಕ್ಷಣಗಳು:
*ಕಾಯಿಗಳ ಮೇಲೆ ಕಂದು ಬಣ್ಣದ ಶಿಲೀಂದ್ರದ ಬೆಳವಣಿಗೆ ಕಂಡು ಬರುತ್ತದೆ.
*ನಂತರ ಬಿಳಿ ಶಿಲೀಂದ್ರದ ಬೆಳವಣಿಗೆ ಕಂಡು ಬಂದು ಕಾಯಿಗಳು ಕೊಳೆಯಲು ಪ್ರಾರಂಭಿಸಿ ಉದುರುತ್ತವೆ.
*ಗೊಂಚಲುಗಳೆಲ್ಲಾ ಕಪ್ಪಾಗಿ ಕಾಣುತ್ತದೆ.
*ಗಿಡದ ಬೆಳವಣಿಗೆ ಕುಂಠಿತಗೊಂಡು ಇಳುವರಿಯಲ್ಲಿ ಹೆಚ್ಚಿನ ಹಾನಿ ಕಂಡುಬರುತ್ತದೆ.
*ಜೂನ್ ತಿಂಗಳಿನಿಂದ ಸೆಪ್ಟೆಂಬರ್ ನ ವರೆಗೆ ರೋಗದ ತೀವ್ರತೆ ಹೆಚ್ಚಿರುತ್ತದೆ.
ಅಡಿಕೆಯಲ್ಲಿ ಕೊಳೆರೋಗದ ನಿರ್ವಹಣಾ ಕ್ರಮಗಳು:
*ಕೊಳೆ ರೋಗ ಮತ್ತು ಸುಳಿ ಕೊಳೆ ರೋಗವನ್ನು ತಡೆಗಟ್ಟಲು ಶೇ 1 ರ ಬೋರ್ಡೋ ದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅಥವಾ 2ಗ್ರಾಂ ಮೆಟಲ್ಆಕ್ಸಿಲ್+ ಮ್ಯಾಂಕೋಜೆಬ್ 75 WP 2ಗ್ರಾಂ ಒಂದು ಲೀಟರ್ ನೀರಿನಲ್ಲಿ ಕರಗಿಸಿ ಮಳೆಗಾಲ ಪ್ರಾರಂಭವಾಗುವುದಕ್ಕೆ ಮೊದಲು ಮತ್ತು 30 ರಿಂದ 45 ದಿನಗಳ ನಂತರ ಇನ್ನೊಮ್ಮೆ ಸಿಂಪಡಿಸಬೇಕು.
*ರೋಗಪೀಡಿತ ಎಲೆಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿ ಆ ಭಾಗಕ್ಕೆ ಶೇ. 1 ರ ಬೋರ್ಡೋ ದ್ರಾವಣವನ್ನು ಅಥವಾ 2ಗ್ರಾಂ ಮೆಟಲ್ಆಕ್ಸಿಲ್+ ಮ್ಯಾಂಕೋಜೆಬ್ 75 WP 2ಗ್ರಾಂ ಅನ್ನು ಒಂದು ಲೀಟರ್ ನೀರಿನಲ್ಲಿ ಕರಗಿಸಿ ಸುಳಿ ಭಾಗಕ್ಕೆ ಹಾಕಬೇಕು.
ಇದಲ್ಲದೆ ಕಾಯಿ ಗೊಂಚಲುಗಳನ್ನು ಜೂನ್ ತಿಂಗಳಿನಲ್ಲಿ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚುವುದರಿಂದ ಕೊಳೆ ರೋಗವನ್ನು ನಿಯಂತ್ರಿಸಬಹುದು.