ಯೋಗವು ವ್ಯಾಯಾಮದ ಒಂದು ಪರಿಣಾಮಕಾರಿ ರೂಪವಾಗಿದೆ, ಇದರ ಮೂಲಕ ದೇಹದ ಭಾಗಗಳಲ್ಲಿ ಮಾತ್ರವಲ್ಲದೆ ಮನಸ್ಸು ಮತ್ತು ಮೆದುಳಿನ ಆರೋಗ್ಯ ಹಾಗೂ ಮಾನಸಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಡಾ. ಜ್ಯೋತಿ ಎಂ. ರಾಠೋಡ್,
ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದಲ್ಲಿ ದಿನಾಂಕ 21-06-2023ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ) ಕೆ.ವಿ.ಕೆ., ಶಿವಮೊಗ್ಗ ಮಾತನಾಡಿ, ಪ್ರತಿ ವರ್ಷ ಜೂನ್, 21ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವೆಂದು ಆಚರಿಸಲಾಗುತ್ತದೆ. ಯೋಗವು ವ್ಯಾಯಾಮದ ಒಂದು ಪರಿಣಾಮಕಾರಿ ರೂಪವಾಗಿದೆ, ಇದರ ಮೂಲಕ ದೇಹದ ಭಾಗಗಳಲ್ಲಿ ಮಾತ್ರವಲ್ಲದೆ ಮನಸ್ಸು ಮತ್ತು ಮೆದುಳಿನ ಆರೋಗ್ಯ ಹಾಗೂ ಮಾನಸಿಕ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಡಾ. ಅಶೋಕ್, ಎಂ., ವಿಜ್ಞಾನಿ (ಪಶು ವಿಜ್ಞಾನ) ಇವರು ಮಾತನಾಡಿ ಹಿಂದಿನ ಕಾಲದ ಜನರು ತುಂಬಾ ಬಲಶಾಲಿಗಳು ಮತ್ತು ಶಕ್ತಿಶಾಲಿಗಳಾಗಿದ್ದರು. ಹೀಗಾಗಲು ಹಲವು ಕಾರಣಗಳಲ್ಲಿ ಯೋಗ ಕೂಡ ಒಂದು. ದೇಹವನ್ನು ಬಲಪಡಿಸಲು ಮತ್ತು ನಮ್ಮ ದೇಹವು ವಿವಿಧ ಪರಿಸರ ಪರಿಸ್ಥಿತಿಗಳನ್ನು ಎದುರಿಸಲು ಯೋಗವು ಸಹಾಯ ಮಾಡುತ್ತದೆ ಎಂದು ಹೇಳಿದರು.
ಸದರಿ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂಧಿ ವರ್ಗದವರು ಭಾಗವಹಿಸಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದರು.