ರಸಗೊಬ್ಬರಗಳ ಸಮತೋಲನ ಬಳಕೆ ಮತ್ತು ಕೃಷಿ ಅರಣ್ಯೀಕರಣ – ಅರಿವು ಕಾರ್ಯಕ್ರಮ

75 ವರ್ಷಗಳ ಸ್ವಾತಂತ್ರ್ಯದ ಸ್ಮರಣಾರ್ಥದ ಕಾರ್ಯಕ್ರಮಗಳ ಸರಣಿಯಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ತಂತ್ರಜ್ಞರ ಸಂಸ್ಥೆ, ಶಿವಮೊಗ್ಗ ಇವರ ಸಹಯೋಗದೊಂದಿಗೆ ಕೆ.ವಿ.ಕೆ, ಶಿವಮೊಗ್ಗದಲ್ಲಿ ದಿನಾಂಕ 21-06-2022ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಯೋಜಿಸಿ, ರೈತರಿಗೆ ರಸಗೊಬ್ಬರಗಳ ಸಮತೋಲನ ಬಳಕೆ ಮತ್ತು ಕೃಷಿ ಅರಣ್ಯೀಕರಣದ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ) ಕೆ.ವಿ.ಕೆ., ಶಿವಮೊಗ್ಗ ಮಾತನಾಡಿ, ಯೋಗದ ಅನಿವಾರ್ಯತೆ ಮತ್ತು ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್, 21ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವೆಂದು ಆಚರಿಸಲಾಗುತ್ತದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಡಾ. ಅರುಣ್‍ಕುಮಾರ್ ಬಿ. ಆರ್., ವಿಜ್ಞಾನಿ (ಮಣ್ಣು ವಿಜ್ಞಾನ), ಇವರು ರಸಗೊಬ್ಬರಗಳ ಸಮತೋಲನ ಬಳಕೆಯ ಕುರಿತು ರೈತರಿಗೆ ನ್ಯಾನೋ ರಸಗೊಬ್ಬರಗಳ ಬಳಕೆ, ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರಗಳ ಶಿಫಾರಸ್ಸು, ಸುಸ್ಥಿರತೆಯೊಂದಿಗೆ ರಸಗೊಬ್ಬರಗಳ ಸಮರ್ಥ ಬಳಕೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಮಣ್ಣಿನ ಆರೋಗ್ಯ ಚೀಟಿ ಮಹತ್ವ ಮತ್ತು ಯೋಜನೆ, ಬೆಳೆಗಳ ತ್ಯಾಜ್ಯ ನಿರ್ವಹಣೆ, ಮತ್ತು ಮಣ್ಣು ನೀರು ಸಂರಕ್ಷಣೆಗಳ ಕುರಿತು ಅರಿವು ಮೂಡಿಸುವ ಉದ್ದೇಶಗಳೊಂದಿಗೆ ಉಪನ್ಯಾಸ ನೀಡಿದರು. ಡಾ. ಅರುಣಕುಮಾರ್,ಪಿ. ವಿಜ್ಞಾನಿ (ಕೃಷಿ ವಿಸ್ತರಣೆ), ಕೃಷಿ ಅರಣ್ಯ ವಿವಿಧ ವಿಷಯಗಳ ಕುರಿತು ಉಪನ್ಯಾಸವನ್ನು ನೀಡಿದರು. ಅದರಲ್ಲಿ ಪ್ರಮುಖವಾಗಿ ಕೃಷಿ ಅರಣ್ಯದ ಪ್ರಯೋಜನಗಳು, ಕೃಷಿ ಅರಣ್ಯದ ವಿಧಗಳು ಮತ್ತು ಬೆಳೆಗಳು, ಭಾರತದಲ್ಲಿ ಕೃಷಿ ಅರಣ್ಯ, ಕೃಷಿ ಅರಣ್ಯದ ಪ್ರಮುಖ ಗುಣಲಕ್ಷಣಗಳು ಮತ್ತು ವಿಭಾಗಗಳು. ಇದರ ಜೊತೆಗೆ ಸಾಮಾಜಿಕ ಅರಣ್ಯ, ಸಮುದಾಯ ಅರಣ್ಯ, ಗ್ರಾಮ ಅರಣ್ಯ ಮತ್ತು ಕೃಷಿ ಅರಣ್ಯ ಮುಂತಾದ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರು, ರೈತ ಮಹಿಳೆಯರು ಮತ್ತು ಗ್ರಾಮೀಣ ಯುವಕರನ್ನು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಮಣ್ಣು ಪರೀಕ್ಷೆ ಪ್ರಯೋಗಾಲಯ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣಾ ತಾಕುಗಳಿಗೆ ಭೇಟಿ ಮಾಡಿಸಿ ಮಾಹಿತಿ ನೀಡಲಾಯಿತು ಮತ್ತು ಮಣ್ಣು ಮಾದರಿ ಸಂಗ್ರಹಣೆ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಶ್ರೀ ಬಸವರಾಜ, ಎಂ., ಕು|| ಸ್ಮಿತಾ, ಜಿ. ಬಿ., ಡಾ. ನಿರಂಜನ, ಡಾ. ನಾಗರಾಜ, ಆರ್. ಹಾಗೂ ಸಿಬ್ಬಂದಿಗಳ ಜೊತೆ ಕೃಷಿ ತಂತ್ರಜ್ಞರ ಸಂಸ್ಥೆ, ಶಿವಮೊಗ್ಗದ ಸಿಬ್ಬಂದಿಗಳೂ ಹಾಗೂ 30 ಜನ ರೈತ ಮತ್ತು ರೈತ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ|| ಅಶೋಕ್ ಎಂ., ವಿಜ್ಞಾನಿ (ಪಶು ವಿಜ್ಞಾನ) ನೆರವೇರಿಸಿದರು.

error: Content is protected !!