ಶಿವಮೊಗದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಷಟಲ್ ಬ್ಯಾಡ್ಮಿಂಟನ್ ಹಾಗೂ ಕ್ರಿಕೆಟ್ ಗಾಗಿ
ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ರಾವ್ ಸ್ಪೋರ್ಟ್ಸ್ ಅರೆನಾ ಆರಂಭಗೊಂಡಿದೆ.

ಶಿವಮೊಗ್ಗದ ಗುಂಡಪ್ಪ ಶೆಡ್ ನಲ್ಲಿರುವ ರಾಮರಾವ್ ಲೇಔಟ್‌ನಲ್ಲಿ ಸುಂದರವಾದ ಪರಿಸರದಲ್ಲಿರುವ ಈ ಕ್ರೀಡಾಂಗಣದಲ್ಲಿ ಷಟಲ್ ಬ್ಯಾಡ್ಮಿಂಟನ್‌ಗಾಗಿ ಐದು ಕೋರ್ಟ್ ಹಾಗೂ ಕ್ರಿಕೆಟ್ ಗಾಗಿ ಮೂರು ಪಿಚ್ ಗಳನ್ನು ನಿರ್ಮಿಸಲಾಗಿದೆ. ಇಂಡೋರ್ ಕ್ರಿಕೆಟ್ ಪಿಚ್ ಶಿವಮೊಗ್ಗದಲ್ಲೇ ಇದು ಮೊದಲನೆಯದಾಗಿದೆ.
ಈ ಕ್ರೀಡಾಂಗಣ ಬೆಳಗ್ಗೆ 5ಗಂಟೆಯಿಂದ ರಾತ್ರಿ 10ಗಂಟೆಯವರೆಗೆ ಕ್ರೀಡಾಪಟುಗಳಿಗೆ ತೆರೆದಿರುತ್ತದೆ.
ಬ್ಯಾಡ್ಮಿಂಟನ್ ನ ಐದು ಕೋರ್ಟ್ ಗಳಲ್ಲಿ ನಿತ್ಯವೂ ತರಬೇತಿ ನಡೆಯಲಿದೆ, ಅಲ್ಲದ, ನಿತ್ಯವೂ
ಕ್ರೀಡಾಪಟುಗಳು ಬಂದು ಅಭ್ಯಾಸ ನಡೆಸಲು ಅವಕಾಶವಿದೆ.
ಮುಖ್ಯ ತರಬೇತುದಾರ ಅರುಣ್ ಆರ್
ಕರ್ನಾಟಕ ರಾಜ್ಯ ಷಟಲ್ ಬ್ಯಾಡ್ಮಿಂಟನ್ ಅಸೋಷಿಯೇಷನ್ ಕಾರ್ಯನಿರ್ವಾಹಕ ಮಂಡಳಿಯ
ಸದಸ್ಯರಾಗಿರುವ ಆರ್. ಅರುಣ್ ಮಲೆನಾಡಿನ ಹಮ್ಮೆಯ ಕ್ರೀಡಾಪಟು ಶಿವಮೊಗ್ಗ ಜಿಲ್ಲಾ ಷಟಲ್
ಬ್ಯಾಡ್ಮಿಂಟನ್ ಅಸೋಷಿಯೇಷನ್ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಕಳೆದ ಎರಡು ದಶಕಗಳಿಂದ ಷಟಲ್ ಬ್ಯಾಡ್ಮಿಂಟನ್ ಕೋಚ್ ಆಗಿ ಸೇವೆ
ಸಲ್ಲಿಸುತ್ತಿರುವ ಅರುಣ್ ಆರ್. ಅವರು ರಾವ್ ಸ್ಪೋರ್ಟ್ಸ್ ಅರೆನಾದ ಮುಖ್ಯಸ್ಥರಾಗಿದ್ದಾರೆ. ಇವರಿಂದ
ತರಬೇತಿ ಪಡೆದ 15 ಕ್ಕೂ ಹೆಚ್ಚು ಕ್ರೀಡಾಪಟುಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ
ಸ್ನಾನಗಳನ್ನು ಪಡೆದಿದ್ದಾರೆ. ಇವರೊಂದಿಗೆ ಆರ್. ಆದಿತ್ಯ ಅವರೂ ರಾವ್ ಸ್ಪೋರ್ಟ್ಸ್ ಅರನಾದ
ಪುಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅರುಣ್ ಹಾಗೂ ಆದಿತ್ಯ ಅವರೊಂದಿಗೆ ಬೆಂಗಳೂರಿನಲ್ಲಿ
ಇರುವ ಅಜಯ್ ಕೂಡಾ ರಾವ್ ಸ್ಪೋರ್ಟ್ಸ್ ಅರನಾದಲ್ಲಿ ವಿವಿಧ ತರಬೇತಿ ಶಿಬಿರಗಳಿಗೆ
ಕೈಜೋಡಿಸಲಿದ್ದಾರೆ.
ಈ ಕ್ರೀಡಾಂಗಣದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪಂದ್ಯಗಳನ್ನು ನಡೆಸಲು ಅವಕಾಶವಿದೆ.
ಜೊತೆಗೆ ಬೇರೆ ಬೇರೆ ಕ್ಲಬ್ ಗಳೂ ಇಲ್ಲಿ ತರಬೇತಿ ನೀಡಲು ಅವಕಾಶವಿದೆ. ವೈಯಕ್ತಿಕವಾಗಿ ತರಬೇತಿ
ಪಡೆಯಲೂ ಅವಕಾಶವಿದೆ. ವರ್ಷವಿಡೀ ಬೇರೆಬೇರೆ ವಯೋಮಾನದವರಿಗೆ ವಿಶೇಷ ತರಬೇತಿ
ಶಿಬಿರಗಳನ್ನು ಆಯೋಜನೆ ಮಾಡಲು ಉದ್ದೇಶಿಸಲಾಗಿದೆ. ಶಿವಮೊಗ್ಗದಲ್ಲಿ ಸರಿಸುಮಾರು 4-5 ತಿಂಗಳು ಮಳೆ ಬರುತ್ತದೆ. ಈ ಸಂದರ್ಭದಲ್ಲಿ ಕ್ರೀಡಾಪಟುಗಳ ಅಭ್ಯಸವೇ ನಿಂತು ಹೋಗುತ್ತದೆ. ಆದರೆ, ರಾವ್ ಸ್ಪೋರ್ಟ್ಸ್ ಅರೆನಾದಲ್ಲಿ ಯಾವುದೇ ಅಡೆತಡೆ ಇಲ್ಲದೆ ತರಬೇತಿ- ಅಭ್ಯಾಸ ಪಡೆಯಬಹುದಾಗಿದೆ.

ಕ್ರೀಡಾಂಗಣದ ವಿವರ:
100 ಕೆಲಸದ ದಿನಗಳಲ್ಲಿ ವಿಶ್ವ ದರ್ಜೆಯ ಈ ಕ್ರೀಡಾಂಗಣ ನಿರ್ಮಾಣವಾಗಿದೆ.
• 12500 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಕ್ರೀಡಾಂಗಣ 37 ಅಡಿ ಎತ್ತರವಿದೆ.

ನೆಲಹಾಸು: ಸಿಲಿಕಾನ್ ತಂತ್ರಜ್ಞಾನ ಜರ್ಮನ್ ಇಂಜಿನಿಯರ್ಡ್ ಹೈಬ್ರಿಡ್ ಬ್ಯಾಡ್ಮಿಂಟನ್
ಕೋರ್ಟ್ ಮತ್ತು ಕ್ರಿಕೆಟ್ ಆಸ್ಕೋ ಟರ್ಫ್ ಪಿಚ್ ಇದೆ.
• ಎಲ್‌ಇಡಿ ಲೈಟ್‌ಗಳು: ಈ ಕ್ರೀಡಾಂಗಣದಲ್ಲಿ ಅಳವಡಿಸಿರುವ ವಿಶೇಷ ಎಲ್‌ಇಡಿ ಲೈಟ್
ಗಳಿಗೆ 350 ಲಕ್ಸ್ ಮಟ್ಟವಿದೆ. ಈ ಬೆಳಕಿನಲ್ಲಿ ಶಟಲ್‌ಗಳು ಗಂಟೆಗೆ ೪00ಕಿಮೀ ವೇಗದಲ್ಲಿ
ಸಾಗುವಾಗಲೂ ಸ್ಪಷ್ಟವಾಗಿ ಗೋಚರಿಸುತ್ತವೆ.
• ದ್ವಿಚಕ್ರ ಮತ್ತು 4 ಚಕ್ರದ ವಾಹನಗಳಿಗೆ ಸಾಕಷ್ಟು ಪಾರ್ಕಿಂಗ್ ಸ್ಥಳ.

ಸುಸಜ್ಜಿತ ಸ್ನಾನಗೃಹಗಳು ಮತ್ತು ಬಟ್ಟೆ ಬದಲಾವಣೆ ಕೊಠಡಿಗಳು
ಶುದ್ಧ ಕುಡಿಯುವ ನೀರು
20 ವರ್ಷಗಳ ಅನುಭವ ಹೊಂದಿರುವ ರಾಷ್ಟ್ರೀಯ ಮಟ್ಟದ ತರಬೇತುದಾರರು.
ಹೂರಾಂಗಣ ಫಿಟ್ನಸ್ ಪುದೇಶ


24 ಗಂಟೆಗಳ ಪವರ್ ಬ್ಯಾಕ್ ಅಪ್
ಇಷ್ಟೆಲ್ಲಾ ಸೌಲಭ್ಯಗಳಿರುವ ಈ ರಾವ್ ಸ್ಪೋರ್ಟ್ಸ್ ಅರೆನಾದಿಂದ ಮಲೆನಾಡಿನಲ್ಲಿ ಷಟಲ್
ಬ್ಯಾಡ್ಮಿಂಟನ್ ಹಾಗೂ ಕ್ರಿಕೆಟ್ ನಲ್ಲಿ ವಿಶೇಷ ಸಾಧನೆ ಮಾಡಲು ಕ್ರೀಡಾಪಟುಗಳಿಗೆ ಅವಕಾಶ ಸಿಗಲಿದೆ.
ಉದ್ಘಾಟನೆ:
ಮಲೆನಾಡಿನ ಹೆಮ್ಮೆಯ ಈ ರಾವ್ ಸ್ಪೋರ್ಟ್ಸ್ ಅರನಾ ಇದೇ ತಿಂಗಳ 12ರ ಭಾನುವಾರ ವಿದ್ಯುಕ್ತವಾಗಿ
ಉದ್ಘಾಟನೆಗೊಳ್ಳಲಿದೆ. ಜಿಲ್ಲೆಯ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ವಟುಗಳು ಈ
ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

ಜಿ.ಎಸ್.ನಾಗರಾಜ್ ಆರ್.ಆದಿತ್ಯ,ಆರ್. ಅರುಣ್
ಆರ್. ಅಜೇಯ್ ಪತ್ರಿಕಾ ಗೋಷ್ಟಿ ಯಲ್ಲಿ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ರಾವ್ ಸ್ಪೋರ್ಟ್ಸ್ ಅರೇನಾ, ರಾಮರಾವ್ ಲೇಔಟ್, ಗುಂಡಪ್ಪ ಶೆಡ್ ಶಿವಮೊಗ್ಗ. ಮೊಬೈಲ್ ಸಂಖ್ಯೆ 98453 54052

error: Content is protected !!