ರಕ್ತದಾನವು ಜೀವಗಳನ್ನು ಉಳಿಸುವ ಶಕ್ತಿಯನ್ನು ಹೊಂದಿದೆ. ರಕ್ತದಾನವು ಹೊಸ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಇದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರಬಹುದು. ವ್ಯಕ್ತಿಯು ತಮ್ಮ ಸ್ವಂತ ದೇಹದ ಆರೋಗ್ಯ ಸ್ಥಿತಿಯ ಬಗ್ಗೆ ನವೀಕೃತವಾಗಿರಲು ಸಾಧ್ಯವಾಗುತ್ತದೆ.ನಿಯಮಿತ ರಕ್ತದಾನವು ರಕ್ತ ಪೂರೈಕೆ ಸರಪಳಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ತುರ್ತು ಪರಿಸ್ಥಿತಿಗಳು, ಶಸ್ತ್ರಚಿಕಿತ್ಸೆಗಳು ಮತ್ತು ದೀರ್ಘಕಾಲದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ನಿರ್ಣಾಯಕವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ . ಅರುಣ್ .ಎಂ .ಎಸ್ ಅವರು ಹೇಳಿದರು . ಐಎಂಎ ವತಿಯಿಂದ ವಿಶ್ವ ರಕ್ತದಾನಿಗಳ ದಿನವಾದ ಜೂನ್ 14 ರಂದು ಐಎಂಎ ಸದಸ್ಯರ ರಕ್ತ ದಾನ ಶಿಬಿರವನ್ನು ರೋಟರಿ ರಕ್ತನಿಧಿಯಲ್ಲಿ ಏರ್ಪಡಿಸಲಾಗಿತ್ತು .
ರಕ್ತದಾನ ಒಂದು ಜೀವದಾನ.
ರಕ್ತದಾನವು ಅಗತ್ಯವಿರುವ ಸಾವಿರಾರು ಜೀವಗಳಿಗೆ ಜೀವಸೆಲೆಯಾಗಿದೆ, ರಕ್ತದಾನವು ಜೀವಗಳನ್ನು ಉಳಿಸುವುದನ್ನೂ ಮೀರಿದ್ದಾಗಿದೆ. ಇದು ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ ಮತ್ತು ತುರ್ತು ಪರಿಸ್ಥಿತಿಗಳಿಗೆ ಒಳಗಾಗುವ ರೋಗಿಗಳಿಗೆ ಅಗತ್ಯವನ್ನು ಪೂರೈಸುವುದು ಮಾತ್ರವಲ್ಲ, ಹಲಾವಾರು ಗರ್ಭಿಣಿ ಸ್ತ್ರೀಯರಲ್ಲಿಯೂ ರಕ್ತದ ಪೂರೈಕೆ ಅವಶ್ಯವಾಗಿದ್ದು , ಎಲ್ಲರು ಅಂಜಿಕೆ ,ಹೆದರಿಕೆ ಬದಿಗಿಟ್ಟು ಈ ಶ್ರೇಷ್ಠ ದಾನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಐಎಂಎ ಕಾರ್ಯದರ್ಶಿ ಡಾ . ರಕ್ಷ ರಾವ್ ತಿಳಿಸಿದರು .
ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರಾದ ಡಾ .ಸುಭಾಷ್ , ಡಾ . ಅನೂಪ್ ರಾವ್ , ಡಾ . ಪ್ರವೀಣ್ , ರೋಟರಿಯನ್ ಶ್ರೀ . ವಿಜಯಕುಮಾರ್ , ರಕ್ತನಿಧಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ . ಎಸ್ . ಕೆ . ಸತೀಶ್ ಉಪಸ್ಥಿತರಿದ್ದರು . ಹಲವಾರು ವೈದ್ಯರು ಸ್ವಯಂಪ್ರೇರಿತರಾಗಿ ಈ ಮಹತ್ತರ ದಾನದಲ್ಲಿ ಭಾಗಿಯಾದರು.
ಅದೇ ದಿನ ಬೆಳಿಗ್ಗೆ ಐಎಂಎ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಹಾಗು ಕುಟುಂಬ ಕಲ್ಯಾಣ ಇಲಾಖೆಯ ಸಭಾ ಕಾರ್ಯಕ್ರಮದಲ್ಲಿ ಅತಿಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಐಎಂಎ ಸಹ ಕಾರ್ಯದರ್ಶಿಗಳಾದ ಡಾ . ಅನೂಪ್ ರಾವ್ ಅವರನ್ನು 20 ಬಾರಿ ರಕ್ತದಾನ ಮಾಡಿದ್ದಕ್ಕೆ ಗೌರವಿಸಲಾಯಿತು .